History of the Sunroof: ಅಂದಹಾಗೆಯೇ ಕಾರುಗಳಲ್ಲಿನ ಸನ್ರೂಫ್ ಬಳಕೆಗೆ ಸುಮಾರು 84 ವರ್ಷಗಳ ಇತಿಹಾಸವಿದೆ. 1937ರಲ್ಲಿ ಕಾರೊಂದಕ್ಕೆ ಮೊದಲ ಸನ್ರೂಫ್ ಅಳವಡಿಲಾಯಿತು.
ಇತ್ತೀಚೆಗೆ ಮಾರುಕಟ್ಟೆಗೆ ಧಾವಿಸುತ್ತಿರುವ ಎಲ್ಲಾ ಕಾರುಗಳಲ್ಲಿ Sunroof ಅಳವಡಿಸಿಕೊಂಡಿರುತ್ತದೆ. ಆದರೆ ಅನೇಕ ವರ್ಷಗಳ ಹಿಂದೆಯೇ ಸನ್ರೂಫ್ ಬಗ್ಗೆ ಅನ್ವೇಷಣೆ ನಡೆದಿತ್ತು.
ಆದರೀಗ ವಿವಿಧ ಕಾರು ಕಂಪೆನಿಗಳು ತಮ್ಮ ಕಾರುಗಳ ಮೇಲೆ ಸನ್ರೂಫ್ ಅಳವಡಿಸಿಕೊಳ್ಳುವುದರ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತಿದೆ.
ಪ್ರಾರಂಭದಲ್ಲಿ ಐಶಾರಾಮಿ ಕಾರುಗಳಲ್ಲಿ ಸನ್ರೂಫ್ಗಳನ್ನು ಅಳವಡಿಸಲಾ ಗುತಿತ್ತು. ಆದರೀಗ ಕಾರು ಖರೀದಿದಾರರ ಆಯ್ಕೆ ಮೇರೆಗೆ ಸನ್ರೂಫ್ ಅಳವಡಿಸಿದ ಕಾರನ್ನು ಕೊಂಡುಕೊಳ್ಳಬಹುದಾಗಿದೆ.