Get loan on Whatsapp: ವಾಟ್ಸ್ಆ್ಯಪ್(Whatsapp) ಅಂದಕೂಡಲೇ ಎಲ್ಲರಿಗೂ ಸಂದೇಶ(message) ಕಳಿಸುವ ಉತ್ತಮವಾದ ಮಾರ್ಗವೆಂದು ಗೊತ್ತು. ಹೌದು, ವಿಶ್ವದಲ್ಲೇ ಸಂದೇಶ ವಿನಿಮಯ ಮಾಡಿಕೊಳ್ಳುವ ಆ್ಯಪ್ಗಳಲ್ಲಿ ವಾಟ್ಸ್ಆ್ಯಪ್ ಬೆಸ್ಟ್. ಇದೀಗ ನೀವು ವಾಟ್ಸ್ಆ್ಯಪ್ ಮೂಲಕ ಲೋನ್(loan) ಸಹ ಪಡೆದುಕೊಳ್ಳಬಹುದು. ಅದು ಹೇಗೆ ಅಂತಾ ನಾವು ಹೇಳುತ್ತೇವೆ. ಕ್ರೂರಿ ಕೊರೋನಾ(Corona) ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಜನರ ಜೀವವನ್ನ ಹಿಂಡಿ ಹಿಪ್ಪೆ ಮಾಡಿದೆ. ಅದೆಷ್ಟೋ ಜನರ ಉಸಿರನ್ನ ಕಸಿದ ಕೊರೋನಾ, ಲಕ್ಷಾಂತರ ಜನರ ಬದುಕನ್ನ ನುಂಗಿ ಹಾಗಿದೆ.
ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದವರ ಬದುಕು ಮೂರಾಬಟ್ಟೆ ಆಗಿದೆ. ಕೊರೋನಾ ಬಂದಮೇಲೆ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಕ್ಷಾಂತರ ಜನರ ವ್ಯಾಪಾರದಲ್ಲಿ(Business) ಯೂ ಭಾರೀ ನಷ್ಟವನ್ನ ಅನುಭವಿಸಿದ್ದಾರೆ. ಮತ್ತೆ ಸಣ್ಣ ಉದ್ಯಮ ಶುರು ಮಾಡಿ ಮೂರಾಬಟ್ಟೆಯಾಗಿರುವ ಬದುಕನ್ನ ಹೊಲಿದುಕೊಳ್ಳಲು ವಾಟ್ಸ್ಆ್ಯಪ್ ನೆರವಾಗಲಿದೆ. ವಾಟ್ಸ್ಆ್ಯಪ್ ಮೂಲಕ 10 ಲಕ್ಷದವರೆಗೆ ತ್ವರಿತ ಸಾಲ ( instant loan)ವನ್ನು ಪಡೆಯಬಹುದಾಗಿದೆ.
ಬ್ಯಾಂಕೇತರ ಹಣಕಾಸು ಕಂಪನಿ (NBFC) IIFL ಫೈನಾನ್ಸ್ ವಾಟ್ಸ್ಆ್ಯಪ್ನಲ್ಲಿ ತ್ವರಿತ ವ್ಯಾಪಾರ ಸಾಲದ ಸೌಲಭ್ಯವನ್ನು ಆರಂಭಿಸಿದೆ. ಸೂಕ್ತ ದಾಖಲೆಗಳನ್ನ ಬಳಕೆದಾರರು ನೀಡಿದರೆ, 10 ಲಕ್ಷದವರೆಗೂ ಸಾಲ ತೆಗೆದುಕೊಳ್ಳಹುದು. ಇಷ್ಟೇ ಅಲ್ಲದೇ ಕೇವಲ 5 ನಿಮಿಷದಲ್ಲಿ ಈ ಲೋನ್ಗೆ ನೀವು ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ವಾಟ್ಸ್ಆ್ಯಪ್ನಲ್ಲಿ ಲೋನ್ ತೆದುಕೊಳ್ಳುವುದು ಹೇಗೆ? ಲೋನ್ಗೆ ಎಷ್ಟು ಬಡ್ಡಿ? ನಿಜಕ್ಕೂ ನೀವು ವಾಟ್ಸ್ಆ್ಯಪ್ನಿಂದ ಲೋನ್ ತೆಗೆದುಕೊಳ್ಳಬಹುದಾ? ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.