ಆಯುಧ ಪೂಜೆ (Ayudha Pooja)ಮತ್ತು ವಿಜಯ ದಶಮಿ(Vijaya Dashami) ಹಬ್ಬಕ್ಕಾಗಿ ನಗರದಲ್ಲಿ ತಯಾರಿ ಭರದಿಂದ ಸಾಗಿದ್ದು,ಜನರುಸಂಭ್ರಮಸಡಗರದಿಂದಈಗಾಗಲೇಹಬ್ಬದಆಚರಣೆಯನ್ನುಆರಂಭಿಸಿದ್ದಾರೆ. ಬೆಂಗಳೂರಿನಲ್ಲಿಸಹಜನರುಹಬ್ಬದಹಿನ್ನಲೆಹೂವಿನ(Flowers)ಖರೀದಿಮಾಡುತ್ತಿದ್ದು, ನಗರದ ಕೆ.ಆರ್ಮಾರುಕಟ್ಟೆ(K.R.Market)ಸೇರಿದಂತೆಮಲ್ಲೇಶ್ವರಂನಲ್ಲಿಬೆಳ್ಳಂಬೆಳಿಗ್ಗೆವ್ಯಾಪಾರಜೋರಾಗಿದೆ. ಹೂವುಖರೀದಿಮಾಡಲುಜನಜಾತ್ರೆಯಂತೆಸೇರಿದ್ದು, ರಸ್ತೆಯಬದಿಯಲ್ಲಿಯೇಹಣ್ಣು, ಹೂವುಮಾರಾಟಮಾಡಲಾಗುತ್ತಿದೆ. ಇನ್ನುಹಬ್ಬದಹಿನ್ನಲೆಹೂವಿನಬೆಲೆಗಳುಗಗನಕ್ಕೇರಿದ್ದುಕೆ. ಆರ್. ಮಾರುಕಟ್ಟೆಯಲ್ಲಿ ಭರ್ಜರಿ ಜನ ಸೇರಿದ್ದಾರೆ.
ಇನ್ನು ಕನಕಾಂಬರ ಹೂವಿನ ಬೆಲೆ ಹಿಂದೆ 600 ರೂ ಇತ್ತು ಇಂದು 1500ರೂಗೆ ಏರಿಕಾಗಿದೆ. ಹಾಗೆಯೇ ದುಂಡುಮಲ್ಲಿಗೆ 400 ಯಿಂದ 1000ರೂ ಹೆಚ್ಚಾಗಿದೆ. ಇನ್ನು 200 ರೂಗೆ ಮಾರಾಟ ಮಾಡಲಾಗುತ್ತಿದ್ದ ಕಾಕಡ ಬೆಲೆ ಈಗ 500 ರೂ ಆಗಿದೆ. ಜಾಜಿ ಮಲ್ಲಿಗೆ ಸಹ ಹೆಚ್ಚಳವಾಗಿದ್ದು, 150 ರೂ ನಿಂದ 200ರೂವರೆಗೆ ಮಾರಲಾಗುತ್ತಿದೆ.
60 ರೂ ಇದ್ದ ಸೇವಂತಿಗೆ 150 ರೂ ಆಗಿದ್ದು, ಸುಗಂಧರಾಜ 100 ರಿಂದ 300 ರೂಗೆ ಏರಿಕೆಯಾಗಿದೆ. 150 ರೂಗಳಿಗೆ ಮಾರಾಟವಾಗುತ್ತಿದ್ದ ಗುಲಾಭಿಯನ್ನು 200 ರೂ ಮಾರಾಟ ಮಾಡಲಾಗುತ್ತಿದೆ. ಇನ್ನು ತುಳಸಿ ಒಂದು ಮಾರಿಗೆ 50 ರೂ ಇದ್ದರೆ, ಒಂದು ಕಟ್ಟು ಮಾವಿನ ಎಲೆಗೆ 40 ರೂ ಇದೆ.ಹಬ್ಬದ ಕಾರಣ ಹೂವಿನ ಬೆಲೆಯಲ್ಲಿ ಇಷ್ಟೆಲ್ಲ ಏರಿಕೆಯಾಗಿದ್ದರೂ ಸಹ ಜನ ಖರೀದಿ ಮಾಡುವುದನ್ನ ಕಡಿಮೆ ಮಾಡಿಲ್ಲ.