ಹಸಿರು ಶಕ್ತಿಗೆ (Green energy)ಕೊಡುಗೆ ನೀಡುವ ನಿಟ್ಟಿನಲ್ಲಿ ಭಾರತದ ಉನ್ನತ ಮೌಲ್ಯಯುತ ಸಂಸ್ಥೆಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ (RIL) ಷೇರುಗಳು ಎರಡು ಸಂಸ್ಥೆಗಳ ಸ್ವಾಧೀನ ಘೋಷಿಸಿದ ನಂತರ ಸೋಮವಾರದ ಷೇರು ವ್ಯವಹಾರಗಳಲ್ಲಿ RIL ಷೇರುಗಳು ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಸೂಚ್ಯಾಂಕ ದಿಗ್ಗಜರು ಎಂದೆನಿಸಿರುವ RIL ಹಾಗೂ ಬ್ಯಾಂಕ್ಗಳು ಲಾಭಗಳನ್ನು ದಾಖಲಿಸುವುದರೊಂದಿಗೆ ನಿಫ್ಟಿ(Nifty) ದಾಖಲೆಯು ಗರಿಷ್ಠ 18,000ಕ್ಕೆ ಏರಿಕೆಯಾಯಿತು.ಮುಕೇಶ್ ಅಂಬಾನಿಯರ(Mukesh Ambani) ರಿಲಯನ್ಸ್ ಇಂಡಸ್ಟ್ರೀಸ್ ವಾರಾಂತ್ಯದಲ್ಲಿ ಬೆನ್ನು ಬೆನ್ನು ಸ್ವಾಧೀನಗಳನ್ನು ಘೋಷಿಸಿದ್ದು ನಾರ್ವೆಯ ಸೋಲಾರ್ ಪ್ಯಾನೆಲ್ಗಳನ್ನು ನಿರ್ಮಿಸುವ REC ಸೋಲಾರ್ ಹೋಲ್ಡಿಂಗ್ಸ್ ಹಾಗೂ ಶಾಪೂರ್ಜಿ ಪಲ್ಲೊಂಜಿ ಗ್ರೂಪ್ನ ಸ್ಟರ್ಲಿಂಗ್ ಮತ್ತು ವಿಲ್ಸನ್ ಸೋಲಾರ್ನಲ್ಲಿ 40% ಷೇರುಗಳನ್ನು ಖರೀದಿಸಿತು.
ಸೋಲಾರ್ PV ತಯಾರಕ REC ಗ್ರೂಪ್ ಅನ್ನು $771 ಮಿಲಿಯನ್ಗೆ RIL ಸ್ವಾಧೀನಪಡಿಸಿಕೊಂಡಿತು. RECಯ ತಂತ್ರಜ್ಞಾನ ಬಳಸಿಕೊಂಡು ಕಂಪನಿಯು 10 GW ಅನ್ನು ಜಾಮ್ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಚೀನೀ ಸಂಸ್ಥೆಗಳಿಗಿಂತ 75% ಕಡಿಮೆ ಶಕ್ತಿ ಬಳಸುವ ತಂತ್ರಜ್ಞಾನವನ್ನು ವಾಣಿಜ್ಯೀಕರಿಸಿದ ಏಕೈಕ ಸಂಸ್ಥೆ RECಯಾಗಿದೆ. ಸಂಸ್ಥೆಯು ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದಿದೆ ಮತ್ತು RILನ ಸೌರ ವ್ಯವಹಾರಕ್ಕಾಗಿ ರಫ್ತು ಮಾರುಕಟ್ಟೆಯನ್ನು ತೆರೆಯುತ್ತದೆ” ಎಂದು ಜೆಫರೀಸ್ನ ವಿಶ್ಲೇಷಕರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಶಕ್ತಿ ಆಧಾರಿತ ಕೈಗಾರಿಕೆಗಳ ಮೇಲೆ ಚೀನಾದ ನಿರ್ಬಂಧಗಳು ಹಾಗೂ ಚಳಿಗಾಲದ ಉತ್ಸರ್ಜನ ಸಂಕೋಚನ ಅಭಿಯಾನ (winter emission reduction campaign) ವಿಸ್ತರಿಸುವುದರಿಂದ ಶುದ್ಧೀಕರಣ ಚಾಲನೆ ದರಗಳನ್ನು ಕಡಿತಗೊಳಿಸಲಾಗಿದೆ. ಫೆಬ್ರವರಿ 2022ರಲ್ಲಿ ಚಳಿಗಾಲದವರೆಗೆ ಚೀನಾ ತನ್ನ ಹವಾಮಾನ ಗುರಿಗಳಿಗೆ ಬದ್ಧವಾಗಿದ್ದು FY22Eಗೆ O2C ಅಂದಾಜುಗಳಿಗೆ 10-12% ಸಾಮರ್ಥ್ಯ ಹೆಚ್ಚಿಸಲು ಜೆಫರೀಸ್ ನೋಡುತ್ತಿದೆ. ಹಾಗಾಗಿ ಇದು RILನಲ್ಲಿ ಧನಾತ್ಮಕ ನಿಲುವಿಗೆ ಪ್ರಾಶಸ್ತ್ಯ ನೀಡಿದೆ. ಪ್ರತಿ ಷೇರಿಗೆ ಟಾರ್ಗೆಟ್ ಬೆಲೆ 3,050 ರೂ. ನಂತೆ ಖರೀದಿ ದರವನ್ನು ನಿರ್ವಹಿಸಿದೆ.