ಬೆಂಗಳೂರು: ನೈಸ್ ರಸ್ತೆಯಲ್ಲಿ ಓಡಾಡುವ ಗಾಡಿಗಳೇ ಈ ಗ್ಯಾಂಗ್ ನ ಟಾರ್ಗೆಟ್. ರಾತ್ರಿ ವೇಳೆ ಓಡಾಡುವ ಕ್ಯಾಂಟರ್, ಕ್ಯಾಬ್ ಸೇರಿ ದೊಡ್ಡ ಗಾಡಿಗಳನ್ನ ಅಡ್ಡ ಹಾಕುವ ಖದೀಮರು ಬಳಿಕ ಸುಲಿಗೆ ಮಾಡಿ ಎಸ್ಕೇಪ್ ಆಗ್ತಿದ್ರು. ಹೀಗೆ ಸಿಕ್ಕ ಸಿಕ್ಕ ವಾಹನಗಳನ್ನ ತಡೆದು ರಾಬರಿ ಮಾಡುತ್ತಿದ್ದ ಖರ್ತನಾಕ್ ಸುಲಿಗೆಕೋರರನ್ನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ನೈಸ್ ರಸ್ತೆಯಲ್ಲಿ ನೈಸ್ ಅಗಿ ಗೂಡ್ಸ್ ವಾಹನ ತಡೆಯೋ ಈ ಖದೀಮರು, ಡ್ರಾಪ್ ಕೇಳುವ ನೆಪದಲ್ಲಿ ಚಾಲಕರ ಮೊಬೈಲ್, ಪರ್ಸ್ ಕದಿಯುತ್ತಿದ್ರು. ಇದೀಗ ಕೋಣನಕುಂಟೆ ಪೊಲೀಸರು ಸುನೀಲ್, ಹರೀಶ್ ಮತ್ತು ನವೀನ್ ಕುಮಾರ್ ಎಂಬುವರನ್ನ ಖೆಡ್ಡಕ್ಕೆ ಕೆಡವಿದ್ದಾರೆ.
ಡ್ರಾಪ್ ಕೇಳಿ ನಂತರ ಕನ್ನ ಹಾಕ್ತಿದ್ರು..!
ಇದೇ ತಿಂಗಳ 8 ರಂದು ಆರೋಪಿಗಳು ನೈಸ್ ರಸ್ತೆಯ ಬನ್ನೇರುಘಟ್ಟದ ಮುಖ್ಯ ರಸ್ತೆಯಲ್ಲಿ ಶಿವಕುಮಾರ್ ಎಂಬ ಲಾರಿ ಚಾಲಕನನ್ನ ಅಡ್ಡಗಟ್ಟಿ ಹೊಸೂರು ಕಡೆ ಹೋಗಬೇಕು ಎಂದು ಡ್ರಾಪ್ ಕೇಳಿದ್ದಾರೆ. ಚಾಲಕ ಲಾರಿ ನಿಲ್ಲಿಸಿ ಹತ್ತಿಸಿಕೊಳ್ಳಲು ಮುಂದಾದಾಗ ತಕ್ಷಣವೇ ಲಾರಿ ಚಾಲಕನ ಬಳಿ ಮೊಬೈಲ್ ಮತ್ತು ಪರ್ಸ್ ಕದ್ದು ಎಸ್ಕೇಪ್ ಆಗಿದ್ದಾರೆ. ಚಾಲಕ ಸಹ ಅವರನ್ನ ಹಿಂಬಾಲಿಸಿ ಓಡ ತೊಡಗಿದ್ದ, ಈ ವೇಳೆ ಅಸಾಮಿಗಳು ಚಾಕುವಿನಿಂದ ಶಿವಕುಮಾರ್ ಗೆ ಇರಿದು ಗಾಯಗೊಳಿಸಿದ್ದಾರೆ. ಬಳಿಕ ಚಾಲಕ ಶಿವಕುಮಾರ್ ಅಸ್ಪತ್ರೆಗೆ ದಾಖಲಾಗಿ ಬಳಿಕ ದೂರು ನೀಡಿದ್ದ.