ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಕಳೆದ ಮೂರು ನಾಲ್ಕು ದಿನಗಳಿಂದ ನಗರದಲ್ಲಿ ಧಾರಕಾರ ಮಳೆ (Rainfall )ಸುರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಜನರು ಪರದಾಡುವಂತಾಗಿತ್ತು.
ಈ ಮಧ್ಯೆ ಬೆಸ್ಕಾಂ(BESCOM) ಸಹ ಪವರ್ ಕಟ್ (Power Cut)ಮಾಡುತ್ತಿದ್ದು ಜನರ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ. ಇಂದು ಸಹ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದ್ದು, ಯಾವ್ಯಾವ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂಬ ಲಿಸ್ಟ್ ಅಹ ನೀಡಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ
ಮಾರುತಿ ನಗರ, ಯಲಹಂಕ ಓಲ್ಡ್ ಟೌನ್, ಯೋಗೀಶ್ ನಗರ, ವಿನಾಯಕ ನಗರ, ಪಂಪ ಲೇಔಟ್ಮ ಸಿಂಧಿ ಸ್ಕೂಲ್,, ನೇತಾಜಿ ನಗರ, ವೆಂಕಟೇಗೌಡ ಲೇಔಟ್ , ಜೆಪಿ ನಗರ 5 ನೇ ಹಂತ, ಇಸ್ರೋ ಲೇಔಟ್, ಪೈಪ್ ಲೈನ್, ಕೆಎಸ್ ಲೇಔಟ್ 1 ನೇ ಹಂತ, 14 ನೇ ಮೇನ್, ಸಿದ್ದಾಪುರ, ತೂಬರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.