Eggs for Breakfast: ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಎದ್ದ ತಕ್ಷಣ ತಿಂಡಿ ಏನು ಮಾಡುವುದು ಅನ್ನುವುದೇ ದೊಡ್ಡ ಟೆನ್ಶನ್. ಅದು ಬೆಳಗಿನ ತಿಂಡಿ(Breakfast) ಮನುಷ್ಯನಿಗೆ ಬಹಳ ಮುಖ್ಯವಾದ ಆಹಾರ. ಇಡ್ಲಿ, ದೋಸೆ, ಉಪ್ಪಿಟ್ಟು, ಪಲಾವ್, ರೊಟ್ಟಿ ಹೀಗೆ ನೂರಾರು ಬಗೆಯ ತಿಂಡಿಗಳು ಇವೆ.
ಆದರೂ ಬೆಳಗ್ಗೆ ಎದ್ದ ಕೂಡಲೇ ಬ್ರೇಕ್ಫಾಸ್ಟ್ಗೆ ಏನು ತಯಾರಿಸಬೇಕು ಅಂತ ಮಂದಿ ತಲೆಕೆಡಿಸಿಕೊಳ್ಳುತ್ತಾರೆ. ನೀವು ಯಾವುದೇ ತಿಂಡಿ ತಯಾರಿಸಿದ್ರು, ಅದರ ಜತೆ 2 ಮೊಟ್ಟೆ(Eggs) ಪ್ರತಿದಿನ ಸೇವಿಸಿದ್ರೆ ನಿಮ್ಮ ಆರೋಗ್ಯ ಬಹಳ ಚೆನ್ನಾಗಿ ಇರುತ್ತೆ. ಹೀಗಂತ ನಾವು ಹೇಳಿತ್ತಿರುವುದು ಅಲ್ಲ. ಮೊಟ್ಟೆಗಳ ಬಗ್ಗೆ ಹಲವಾರು ವರ್ಷಗಳ ಕಾಲ ಸಂಶೋಧನೆ ಮಾಡಿರುವ ತಜ್ಞರೇ ಸಲಹೆ ಕೊಟ್ಟಿದ್ದಾರೆ. ದಿನಕ್ಕೆ ಒಂದು ಮೊಟ್ಟೆ, ತುಂಬುವುದು ಹೊಟ್ಟೆ ಎಂಬ ಜಾಹೀರಾತನ್ನು ಎಲ್ಲರೂ ನೋಡಿದ್ದೀರಾ. ಆದರೆ ಈಗ ತಜ್ಞರು ದಿನಕ್ಕೆ ಎರಡು ಮೊಟ್ಟೆ ಸೇವಿಸುವಂತೆ ಸಲಹೆ ನೀಡಿದ್ದಾರೆ.
ಮೊಟ್ಟೆಗಳನ್ನ ಸೂಪರ್ಫುಡ್ ಎಂದು ಪರಿಗಣಿಸಲಾಗಿದೆ. ಪ್ರತಿ ದಿನ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನ ಒದಗಿಸುತ್ತದೆ. ಅದಕ್ಕೆ ತಜ್ಞರು ಪ್ರತಿದಿನ ಮೊಟ್ಟೆ ತಿನ್ನುವಂತೆ ಸಲಹೆ ನೀಡುತ್ತಾರೆ. ಪ್ರತಿ ದಿನ ಮೊಟ್ಟೆ ತಿಂದರೆ ನಿಮ್ಮ ದೇಹದಲ್ಲಿ ಆಗುವ ಪ್ರಯೋಜನಗಳೇನು ಗೊತ್ತಾ? ಪ್ರತಿದಿನ 2 ಮೊಟ್ಟೆಗಳನ್ನ ತಿನ್ನುವುದರಿಂದ ಅನೇಕ ಲಾಭಗಳಿವೆ ಅದರಲ್ಲಿಒಂದು ನಿಮ್ಮ ತೂಕವನ್ನು ಸಮತೋಲನದಲ್ಲಿಡಲು ಹಾಗೂ ಸ್ಲಿಮ್ ಆಗಲು ಮತ್ತು ಹಲವು ರೋಗಗಳಿಂದ ಮುಕ್ತರಾಗಲು ಈ ಮೊಟ್ಟೆಗಳು ಸಹಾಯ ಮಾಡುತ್ತವೆ. ಇನ್ನಷ್ಟು ಮೊಟ್ಟೆ ತಿನ್ನುವುದರಿಂದ ಆಗುವ ಲಾಭಗಳು ಇಲ್ಲಿದೆ ನೋಡಿ.