ಅದೆಷ್ಟೋ ಪಾರ್ಶ್ವವಾಯು ಪೀಡಿತರು ತಮಗೆ ಅಂಟಿಕೊಂಡಿರುವ ಸಮಸ್ಯೆಯಿಂದ ನೊಂದುಕೊಂಡು ಕೊನೆಗೆ ಕೊರಗಿ ಕೊರಗಿ ಜೀವ ಬಿಟ್ಟವರಿದ್ದಾರೆ. ಆದರೆ ಸಮಸ್ಯೆ ಎಲ್ಲರಿಗೂ ಬರುತ್ತದೆ. ಅದನ್ನು ಮೆಟ್ಟಿನಿಲ್ಲುವ ಮೂಲಕ ಬಹುದು ಸಾಗಿಸಬೇಕು ಎಂಬುದನ್ನು ತೋರಿಸಿಕೊಟ್ಟ ವ್ಯಕ್ತಿಯೊಬ್ಬರ ಕಥೆ ಇದೀಗ ವೈರಲ್ ಆಗಿದೆ. ಹಾಗಿದ್ದರೆ ಯಾರು ಈತ? ಇಲ್ಲಿದೆ ಮಾಹಿತಿ..
ಹೆಸರು ಟಿ.ಎ ಶಾನವಾಸ್ (46). ಹನ್ನೊಂದು ವರ್ಷಗಳ ಹಿಂದೆ ಅಪಘಾತದಿಂದಾಗಿ ಪಾರ್ಶ್ವವಾಯುವಾಗಿ ಕೊನೆಗೆ ಹಾಸಿಗೆ ಹಿಡಿಯುವಂತೆ ಮಾಡಿತು, ಮೇಲೇಳಲಾಗದ ಸ್ಥಿತಿಯಲ್ಲಿ ಶನವಾಸ್ ಇದ್ದಾರೆ. ಆದರೂ ತಮಗಿದು ಒಂದು ಸಮಸ್ಯೇ ಅಲ್ಲವೆಂಬಂತೆಯೇ ಮಲಗಿದ್ದಲ್ಲಿಂದಲೇ ಕೋಟಿಗಟ್ಟಲೆ ಟಿಂಬರ್ ವಹಿವಾಟು ನಡೆಸಿ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಟಿ.ಎ ಶಾನವಾಸ್ ಟಿಂಬರ್ ವ್ಯವಹಾರದ ಮೂಲಕ ಬದುಕು ಕಟ್ಟಿಕೊಂಡು ಬಂದವರು. ಆದರೆ ಅದೇನಾಯಿತೋ ಏನೋ ಇದ್ದಕ್ಕಿಂದ್ದತೆಯೇ ನಡೆದ ಅಪಘಾತದಿಂದಾಗಿ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿಯಬೇಕಾಯಿತು. ಒಂದು ಸಮಯದಲ್ಲಿ ಎಲ್ಲಾ ಅಗತ್ಯತೆಗಳಿಗೆ ಬೇಕಾದ ಟಿಂಬರ್ ಪೂರೈಸುವ ವಿಶ್ವಾಸಾರ್ಹ ವ್ಯಾಪಾರಿಯಾಗಿದ್ದ ಟಿ.ಎ ಶಾನವಾಸ್ ಸಮಸ್ಯೆ ಒಂದು ಬಂದೆರಗಿದಾಗ ಮನೆ, ಹೆಂಡತಿ, ಬದುಕು ಎಲ್ಲವೂ ಒಂದು ಬಾರಿ ಕಣ್ಣ ಮುಂದೆ ಬರುವುದು ಸಮಯ. ನನ್ನೆಲ್ಲಾ ಕನಸುಗಳು ಮುದುಡಿದವು ಎಂಬ ಯೋಚನೆ ಬರುದೇ ಇರಲಾರದು. ಆದರೆ ಇದಕ್ಕೆ ವ್ಯಾಪಾರಿ ಟಿ.ಎ ಶಾನವಾಸ್ ತಲೆ ಕೆಡಿಸಿಕೊಂಡಿಲ್ಲ.