ಹಾವೇರಿ(Haveri) ಜಿಲ್ಲೆಯಲ್ಲಿ ರಾಕ್ಷಸನ ಬರ್ತ್ ಡೇ (Birthday)ಯನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಗಿದೆ. ಬರೋಬ್ಬರಿ ಹತ್ತು ಕೆ.ಜಿ ತೂಕದ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಬರ್ತ್ ಡೇ ಸೆಲೆಬ್ರೇಟ್ ಮಾಡಲಾಗಿದೆ. ರಾಕ್ಷಸನ ಹುಟ್ಟು ಹಬ್ಬಕ್ಕೆ ಅಂತ ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಕೇಕ್ ತಿನ್ನಿಸಿ ಖುಷಿ ಪಟ್ಟರು. ಅರೇ ಏನಪ್ಪಾ ರಾಕ್ಷಸನ ಬರ್ತ್ ಡೇ ಆಚರಣೆ ಮಾಡ್ತಾರಾ ಎಂದು ಯೋಚನೆ ಮಾಡ್ತಿದ್ರೆ , ಈ ಸ್ಟೋರಿ ಓದಿ
ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ರಾಕ್ಷಸ ಎನ್ನೋ ಹೆಸರಿನ ಹೋರಿ ಇದೆ. ರಾಕ್ಷಸ ಹೆಸರಿನ ಈ ಹೋರಿಗೆ ಅಪಾರವಾದ ಅಭಿಮಾನಿಗಳ ಬಳಗ ಇದೆ. ಕಳೆದ ಆರು ವರ್ಷಗಳ ಹಿಂದೆ ಗ್ರಾಮದ ಕೆಲವು ಹೋರಿ ಅಭಿಮಾನಿಗಳು, ತಮಿಳುನಾಡಿನಿಂದ ಹೋರಿಯನ್ನ ಖರೀದಿಸಿ ತಂದಿದ್ದಾರೆ.
ಹೋರಿಗೆ ಕೊಬ್ಬರಿ ಕಟ್ಟಿ, ಅಲಂಕಾರ ಮಾಡಿ ಕೊಬ್ಬರಿ ಹೋರಿ ಬೆದರಿಸೋ ಸ್ಪರ್ಧೆಗಳಿಗೆ ತಯಾರು ಮಾಡುತ್ತಿದ್ದರಂತೆ. ಅಂದಿನಿಂದ ಈ ಹೋರಿ ಕಾಲಿಟ್ಟ ಅಖಾಡಗಳಲ್ಲೆಲ್ಲ ಧೂಳೆಬ್ಬಿಸಿಕೊಂಡು ಓಡಿ ಪ್ರಶಸ್ತಿಗಳನ್ನ ಪಡೆದುಕೊಂಡೆ ಬರ್ತಿದೆ.