ನಾಗ ಚೈತನ್ಯ ಹಾಗೂಸಮಂತಾ ಅವರ ವಿಚ್ಛೇದನದ ವಿಚಾರ ಬಹಿರಂಗವಾಗ ಆಗುತ್ತಿದ್ದಂತೆಯೇ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಲಾರಂಭಿಸಿವೆ. ಅದರಲ್ಲೂ ಸಮಂತಾ ಅವರ ನಡತೆ ಬಗ್ಗೆ ವೈಯಕ್ತಿಕವಾಗಿ ದಾಳಿ ಮಾಡುವ ವದಂತಿಗಳು ಹರಿದಾಡುತ್ತಿವೆ. ಇದು ನಿಜಕ್ಕೂ ನಟಿಯ ಮನಸ್ಸಿಗೆ ನೋವು ಉಂಟು ಮಾಡಿದೆ. ಸಮಂತಾ ಅವರು ನಾಗ ಚೈತನ್ಯ ಅವರಿಂದ ದೂರಾಗುತ್ತಿರುವ ವಿಷಯದಿಂದಾಗಿ ಅವರು ತುಂಬಾ ನೋವಿನಲ್ಲಿದ್ದಾರೆ.
ಹೌದು, ಸಮಂತಾ ಅವರಿಗೆ ತಮ್ಮ ವೈವಾಹಿಕ ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟದ ಸಮಯವನ್ನು ಎದುರಿಸುವುದು ದೊಡ್ಡ ಸವಾಲಾಗಿದೆ. ಇನ್ನು ಈ ಜೋಡಿಯ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾಲದಕ್ಕೆ ನಾಗ ಚೈತನ್ಯ ಹಾಗೂ ಸಮಂತಾ ಅವರ ವೈಯಕ್ತಿಕ ಜೀವನದ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈ ಕುರಿತಾಗಿದೆ ಈಗ ನಟಿ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಅಕ್ಟೋಬರ್ 2 ರಂದು ಸಮಂತಾ ಹಾಗೂ ನಾಗ ಚೈತನ್ಯ ಅವರು ತಮ್ಮ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಈ ಸುದ್ದಿ ಅಕ್ಕಿನೇನಿ ಕುಟುಂಬ ಹಾಗೂ ಸಮಂತಾ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿತ್ತು. ಇದರ ನಡುವೆ ಈಗ ಈ ವಿಚ್ಛೇದನಕ್ಕೆ ಕಾರಣ ಸಮಂತಾ ಅವರೇ ಎನ್ನುವಂತಹ ಗಾಳಿ ಸುದ್ದಿಗಳು ಹರಿದಾಡುತ್ತಿವೆ.