ಒಂದೆರಡು ವಾರಗಳ ಹಿಂದೆ, ಕೊರಿಯಾದ ಡ್ರಾಮಾ (K-Drama) ಗಳಿಗೆ ಸಂಬಂಧಿಸಿದ ಸಾಮಾನ್ಯವಲ್ಲದ, ವಿವರಿಸಲಾಗದ ಕೊರಿಯಾದ ಶೋ ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಲು ಪ್ರಾರಂಭಿಸಿದ ನಂತರ ಇಡೀ ಜಗತ್ತನ್ನೇ ಆಕರ್ಷಿಸಿದೆ. ನೆಟ್‌ಫ್ಲಿಕ್ಸ್‌ನ (Netflix) ಅನೇಕ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಹೆಚ್ಚು ವೀಕ್ಷಿಸಿದ ಕಾರ್ಯಕ್ರಮಗಳಲ್ಲಿ ಇದೂ ಒಂದಾಗುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅಂದ ಹಾಗೆ ಏನಿದು ಸ್ಕ್ವಿಡ್ ಗೇಮ್ (Squid Game) ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿತಾ..? ಮುಂದೆ ಓದಿ..
ಬದುಕುಳಿಯುವ ನಾಟಕ
ಹೌದು, ಹ್ವಾಂಗ್ ಡಾಂಗ್-ಹ್ಯೂಕ್ ರಚಿಸಿದ ಸ್ಕ್ವಿಡ್ ಗೇಮ್ ಡ್ರಾಮಾ ಸೀರಿಸ್ 456 ವ್ಯಕ್ತಿಗಳ ನಡುವೆ 45.6 ಬಿಲಿಯನ್ ದಕ್ಷಿಣ ಕೊರಿಯಾ ವೊನ್ ಕರೆನ್ಸಿ ಅಥವಾ KRW (ಅಂದಾಜು 290 ಕೋಟಿ ರೂ.) ಬಹುಮಾನದೊಂದಿಗೆ ಎಲ್ಲಾ ವರ್ಗದ 456 ವ್ಯಕ್ತಿಗಳ ನಡುವಿನ ಸ್ಪರ್ಧೆಯಾಗಿದೆ. ದೊಡ್ಡ ಮೊತ್ತದ ಸಾಲಗಳನ್ನು ಹೊಂದಿರುವ ಎಲ್ಲ ಸ್ಪರ್ಧಿಗಳು ದಕ್ಷಿಣ ಕೊರಿಯಾದಲ್ಲಿ ಚಿರಪರಿಚಿತವಾಗಿರುವ ಮಕ್ಕಳ ಆಟಗಳನ್ನು ಆಡುತ್ತಾರೆ.
ಆಟಗಾರರನ್ನು ದೈತ್ಯ ವೇರ್ ಹೌಸ್‌ನಲ್ಲಿ ಕೂಡಿ ಹಾಕಲಾಗುತ್ತದೆ, ಮತ್ತು ತಮ್ಮ ಸಾವಿನವರೆಗೂ ಆಡುವ ಸ್ಪರ್ಧಿಗಳನ್ನು ಮುಖವಾಡಗಳು ಮತ್ತು ಗುಲಾಬಿ ಬಣ್ಣದ ಬಾಡಿ ಸೂಟ್ ಧರಿಸಿರುವ ಕಾವಲುಗಾರರು ಯಾವಾಗಲೂ ಮೇಲ್ವಿಚಾರಣೆ ಮಾಡುತ್ತಾರೆ. ಪ್ರತಿ ‘ಸಾವು’ ವಿಜೇತ ಪರ್ಸ್‌ಗೆ KRW 100 ಮಿಲಿಯನ್ ಅನ್ನು ಸೇರಿಸುತ್ತದೆ.