ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(Bharat Electronics Limited -BEL) ಖಾಲಿ ಇರುವ ಟ್ರೈನಿ ಎಂಜಿನಿಯರ್(Trainee Engineer), ಪ್ರಾಜೆಕ್ಟ್ ಎಂಜಿನಿಯರ್(Engineer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಇಎಲ್(BEL) ಮುಖ್ಯವಾಗಿ ಫ್ರೆಶರ್ಸ್ಗೆ(Fresher’s) ಮಣೆ ಹಾಕಿದ್ದು, ಭಾರತದಾದ್ಯಂತ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬಿಇಎಲ್ ಕಂಪನಿಯಲ್ಲಿ ಖಾಲಿ ಇರುವ ಟ್ರೈನಿ ಎಂಜಿನಿಯರ್ ಹಾಗೂ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 88 ಹುದ್ದೆಗಳು ಖಾಲಿ ಇವೆ. ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತಾ ಮಾನದಂಡ, ಅಂತಿಮ ವರ್ಷದ ಅರ್ಹತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
BEL Recruitment 2021: ಹುದ್ದೆಯ ಮಾಹಿತಿ
ಹುದ್ದೆಯ ಹೆಸರು | ಪ್ರಾಜೆಕ್ಟ್ ಎಂಜಿನಿಯರ್ ಮತ್ತು ಟ್ರೈನಿ ಎಂಜಿನಿಯರ್ |
ವಿದ್ಯಾರ್ಹತೆ | ಬಿ.ಇ/ಬಿ.ಟೆಕ್ |
ಒಟ್ಟು ಹುದ್ದೆಗಳು | 88 |
ಅನುಭವ | ಫ್ರೆಶರ್ಸ್ |
ಸಂಬಳ | ₹25,000-50,000 |
ಉದ್ಯೋಗದ ಸ್ಥಳ | ಪಂಚ್ಕುಲ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 27/10/2021 |