ಸಿನಿಮಾ
ಬಾಲಿವುಡ್ಗೆ ವಿದಾಯ ಹೇಳಿದ ಮೇಲೆ ಈಗ ತನ್ನ ಫೋಟೋ ಶೇರ್ ಮಾಡಿದ Dangal ಸುಂದರಿ Zaira Wasim..!
ದಂಗಲ್ (Dangal) ಹಾಗೂ ಸೀಕ್ರೆಟ್ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿಪ್ರಿಯರ ಮನ ಗೆದ್ದ ನಟಿ ಝೈರಾ ವಾಸಿಂ (Zaira Wasim) ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಹೌದು, ಬಾಲಿವುಡ್ಗೆ ಗುಡ್ ಬೈ ಹೇಳಿದ ನಂತರ ಈಗಲೇ ಝೈರಾ ತಮ್ಮ ಫೋಟೋ ಶೇರ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಝೈರಾ ವಾಸಿಂ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ನ ಬ್ಲಾಕ್ಬಸ್ಟರ್ ಚಿತ್ರ ‘ದಂಗಲ್’ನ ನಟಿ ವಾಸಿಂ ಚಿತ್ರರಂಗದಿಂದ ದೂರವಿರೋದಾಗಿ 2019ರಲ್ಲಿ ಪ್ರಕಟಿಸಿದ್ದರು. ಇದಾದ ನಂತರ ಝೈರಾ ವಾಸಿಂ ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದರು. ಆದರೆ, ತಮ್ಮ ಫೋಟೋ ಮಾತ್ರ ಹಂಚಿಕೊಂಡಿರಲಿಲ್ಲ.
ಬಾಲಿವುಡ್ನಿಂದ ಎರಡು ವರ್ಷಗಳಿಂದ ದೂರ ಇರುವ ಝೈರಾ ವಾಸಿಂ ಈಗ ಮೊದಲ ಸಲ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರ ಲೆಟೆಸ್ಟ್ ಫೋಟೋ ಸದ್ಯ ವೈರಲ್ ಆಗುತ್ತಿದೆ.