ರಾಜ್ಯ

ಮತ್ತೆ ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆ: ಜನಸಾಮಾನ್ಯರಿಗೆ ಶಾಕ್ ಕೊಟ್ಟ ಸರ್ಕಾರ..!

ನವದೆಹಲಿ(ಅ.06): ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನ್ಕಕೇರುತ್ತಲೇ ಇದೆ. ಗೃಹೋಪಯೋಗಿ ವಸ್ತುಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿ ಹೋಗಿದ್ದಾರೆ. ಪೆಟ್ರೋಲ್​-ಡೀಸೆಲ್ (Petrol-Diesel Price) ಹಾಗೂ ಅಡುಗೆ ಎಣ್ಣೆ ಬೆಲೆ (Cooking Oil Price)ಯೂ ಹೆಚ್ಚಾಗುತ್ತಿದೆ.

ದಿನಬಳಕೆಯ ಗ್ಯಾಸ್​ ಸಿಲಿಂಡರ್(LPG Cylinder Price)​ ಬೆಲೆಯನ್ನು ಏರಿಸುತ್ತಿರುವ ಕೇಂದ್ರ ಸರ್ಕಾರ(Union Government) ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಹಾಕಿದೆ. ಪ್ರತಿದಿನ ಬಳಸುವ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​(LPG Price Hike) ಬೆಲೆಯನ್ನು ಈ ತಿಂಗಳು 15 ರೂಪಾಯಿ ಹೆಚ್ಚು ಮಾಡುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿದೆ.

ಬುಧವಾರ ಎಲ್​ಪಿಜಿ ಸಿಲಿಂಡರ್ ಬೆಲೆ 15 ರೂಪಾಯಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ ಸತತ ನಾಲ್ಕನೇ ಬಾರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹೊಸ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಯಾಗಲಿವೆ.

Related Articles

Leave a Reply

Your email address will not be published. Required fields are marked *

Back to top button