ಸಿನಿಮಾ

ಡಾಲಿ ಧನಂಜಯ ಅಭಿನಯದ Rathnan Prapancha ಸಿನಿಮಾ ಒಟಿಟಿಯಲ್ಲಿ ರಿಲೀಸ್​..!

ಸ್ಯಾಂಡಲ್​ವುಡ್​ನಲ್ಲಿ ನಾಯಕನಾಗಿ ನಟಿಸಿದರೂ ಈ ನಟನಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ವಿಲನ್ ಪಾತ್ರ. ಹೀಗಾಗಿಯೇ ಆ ಪಾತ್ರದ ಹೆಸರಿನಿಂದಲೇ ತುಂಬಾ ಜನರು ಇವರನ್ನು ಗುರುತಿಸುತ್ತಾರೆ. ಅವರೇ ಡಾಲಿ ಧನಂಜಯ್ (Dhananjaya)​. ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಂದರ ಹಿಂದೆ ಒಂದು ಸಿನಿಮಾ ರಿಲೀಸ್​ಗೆ ಸಜ್ಜಾಗುತ್ತಿದೆ.

ಹೀಗಿರುವಾಗಲೇ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ  ‘ರತ್ನನ್ ಪ್ರಪಂಚ’ (Rathnan Prapancha) ರಿಲೀಸ್ ದಿನಾಂಕ ಪ್ರಕಟವಾಗಿದೆ. ಒಂದು ಕಡೆ ಅಭಿಮಾನಿಗಳಿಗೆ ಖುಷಿಯ ವಿಷಯವಾದರೂ ಈ ವಿಷಯ ಕೊಂಚ ಅಚ್ಚರಿ ಮೂಡಿಸಿದೆ. ಹೌದು, ಅದಕ್ಕೂ ಕಾರಣವಿದೆ. ಡಾಲಿ ಧನಂಜಯ್ ಅವರು ಈ ಸಿನಿಮಾ ಚಿತ್ರಮಂದಿರದ ಬದಲಾಗಿ ಒಟಿಟಿಯಲ್ಲಿ ತೆರೆ ಕಾಣಲಿದೆ. 

ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರತ್ನನ್​ ಪ್ರಪಂಚ’ ಚಿತ್ರದ ಟ್ರೇಲರ್​, ಪೋಸ್ಟರ್​ಗಳು ರಿಲೀಸ್ ಆಗಿದ್ದು, ಸಿನಿಮಾದ ಬಗೆಗಿನ ಕುತೂಹಲ ಹೆಚ್ಚಿಸಿತ್ತು. ಈಗ ಈ ಸಿನಿಮಾ ಇದೇ ತಿಂಗಳ 22ರಂದು ಒಟಿಟಿ ಮೂಲಕ ರಿಲೀಸ್​ ಆಗಲಿದೆ. ಈ ವಿಷಯವನ್ನು ನಟ ಡಾಲಿ ಧನಂಜಯ್ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button