ಪೋಸ್ಟ್ ಆಫೀಸಿನ ಈ ಯೋಜನೆಗಳಲ್ಲಿ ಹಣ ಹೂಡಿದ್ರೆ ಕೆಲವೇ ವರ್ಷಗಳಲ್ಲಿ ಡಬಲ್ ಹಣ ವಾಪಸ್ ಗ್ಯಾರಂಟಿ..!
Savings Scheme in Post Office: ಪೋಸ್ಟ್ ಆಫೀಸ್ ಉಳಿತಾಯ ಅನ್ನೋದು ಈ ಆಧುನಿಕ ಇಂಟರ್ನೆಟ್ ಯುಗದಲ್ಲೂ ಜನರಲ್ಲಿ ಅತ್ಯಂತ ಹೆಚ್ಚು ನಂಬಿಕೆ ಉಳಿಸಿಕೊಂಡ ಯೋಜನೆಗಳಲ್ಲೊಂದು. ಪೋಸ್ಟ್ ಆಫೀಸಿನಲ್ಲಿ ಸಣ್ಣ ಅವಧಿಯ ಹೂಡಿಕೆ ಇರಲಿ(Small term), ಅಥವಾ ದೀರ್ಘಕಾಲದ ಉಳಿತಾಯ ಯೋಜನೆಗಳಿರಲಿ (Long Term Plans) ಎಲ್ಲವೂ ಒಂದು ರೀತಿಯಲ್ಲಿ ಸೇಫ್ ಎಂದೇ ಜನರ ನಂಬಿಕೆ.
ಅಲ್ಲಿ ನಾವು ಉಳಿಸುವ ಪ್ರತಿ ರೂಪಾಯಿ ಕೂಡಾ ಮಾರುಕಟ್ಟೆಯಲ್ಲಿರುವ ಅತೀ ಹೆಚ್ಚು ಬಡ್ಡಿ ದರದ (High Interest Rate) ಜೊತೆಗೆ ನಮಗೆ ವಾಪಸ್ (Good Returns) ಬರುತ್ತದೆ ಎನ್ನುವ ವಿಶ್ವಾಸ ಉಳಿಸಿಕೊಂಡಿದೆ ಪೋಸ್ಟ್ ಆಫೀಸ್. ಇನ್ನು ಭವಿಷ್ಯದ ದೃಷ್ಟಿಯಿಂದ ಬಹುಶಃ ಎಲ್ಐಸಿ ಬಿಟ್ಟರೆ ಪೋಸ್ಟ್ ಆಫೀಸ್ ಯೋಜನೆಗಳೇ ಅತೀ ಹೆಚ್ಚು ಬಳಕೆಯಲ್ಲಿ ಇರುವಂಥವು ಎನಿಸುತ್ತದೆ.
ಆಗೀಗ ಪೋಸ್ಟ್ ಆಫೀಸಿನ ಕೆಲವು ಯೋಜನೆಗಳ ಬಗ್ಗೆ ನಾವೆಲ್ಲರೂ ತಿಳಿದಿರುತ್ತೇವೆ. ಇಂತಿಷ್ಟು ವರ್ಷಗಳಲ್ಲಿ ಇಷ್ಟು ಹಣ ಬರುತ್ತದೆ ಎನ್ನುವ ಯೋಜನೆಗಳೇ ಹೆಚ್ಚಾಗಿರುತ್ತದೆ. ಆದರೆ ಪೋಸ್ಟ್ ಆಫೀಸಿನಲ್ಲಿ ಇನ್ನೂ ಸಾಕಷ್ಟು ಉಪಕಾರಿ ಯೋಜನೆಗಳಿವೆ. ಸಣ್ಣ ಪುಟ್ಟ ಹೂಡಿಕೆ ಇರಲಿ ಅಥವಾ ದೊಡ್ಡ ಮಟ್ಟಗಿನ ಸೇವಿಂಗ್ಸ್ ಇರಲಿ ಇಟ್ಟ ಹಣ ದುಪ್ಪಟ್ಟಾಗುವ ಭರವಸೆ ನೀಡುವ ಯೋಜನೆಗಳಿವು. ಈ ರೀತಿ ಕೆಲವೇ ವರ್ಷಗಳಲ್ಲಿ ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ತಿಳಿಯೋಣ.