ರಾಜ್ಯ

ಪರಿಷತ್​ ಸದಸ್ಯರಿಂದ ಲಕ್ಷ ಲಕ್ಷ ಮೆಡಿಕಲ್ ಬಿಲ್ ಕ್ಲೈಮ್..!

ಬೆಂಗಳೂರು (ಅಕ್ಟೋಬರ್​ 05); ಮಾರಕ ಕೊರೋನಾ ವೈರಸ್​ (CoronaVirus) ಕಾರಣಕ್ಕೆ ಇಡೀ ದೇಶದ ಜನರ ಬದುಕು ದುಸ್ಥರವಾಗಿದೆ. ದೇಶದ ಆರ್ಥಿಕತೆಯ (Indian Economi) ಜೊತೆ ಜೊತೆ ಜನರೂ ಸಹ ಕೊರೋನಾ ಪ್ರೇರಿತ ಬಡತನಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ದೇಶದಲ್ಲಿ ಬಡತನ ಹೆಚ್ಚಾಗಿದೆ ಎಂದು ಹಲವು ಸಂಶೋಧನಾ ಅಧ್ಯಯನಗಳು ವರದಿ ಮಾಡಿವೆ. ಈ ನಡುವೆ ದಿನೇ ದಿನೇ ಏರುತ್ತಿರುವ (Price Hike) ದಿನೋಪಯೋಗಿ ವಸ್ತುಗಳ ಬೆಲೆ ಜನರ ಬದುಕನ್ನು ಮತ್ತಷ್ಟು ದುಸ್ಥರ ಮಾಡುತ್ತಿವೆ.

ಈ ನಡುವೆ ಕೊರೋನಾ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ಜನ ಆಸ್ಪತ್ರೆಗೆ ಲಕ್ಷ ಲಕ್ಷ ಹಣ ಕಟ್ಟಲಾಗದೆ (Hospital Bill) ಪರದಾಡಿದ ಘಟನೆಗಳಿಗೂ ಈ ದೇಶ ಸಾಕ್ಷಿಯಾಗಿದೆ. ಆದರೆ, ಇಂತಹ ಸಂದರ್ಭದಲ್ಲಿ ಜನರ ಪರ ನಿಲ್ಲಬೇಕಾದ ಪ್ರತಿನಿಧಿಗಳು ಇದೀಗ ಮೆಡಿಕಲ್ ಕ್ಲೈಮ್ (Medical Claim) ಹೆಸರಿನಲ್ಲಿ ತಮ್ಮ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.

ದುಬಾರಿಯಾಗುತ್ತಿದೆ ಮೇಲ್ಮನೆ ಸದಸ್ಯರ ಚಿಕಿತ್ಸೆ ವೆಚ್ಚ..!

ಅಂಕಿಅಂಶಗಳ ಪ್ರಕಾರ ಮತ್ತು ರಾಜ್ಯದ ವಿಧಾನ ಪರಿಷತ್ ಚುನಾವಣಾ ಸಮಯದಲ್ಲಿ ಪ್ರತಿಯೊರ್ವ ಅಭ್ಯರ್ಥಿ ಸಲ್ಲಿಸಿರುವ ದಾಖಲೆಗಳ ಪ್ರಕಾರ ಎಲ್ಲರೂ ಕೋಟಿ ಕೋಟಿ ಒಡೆಯರೇ. ಆದರೂ, ಕೋವಿಡ್ ಕಾಲದಲ್ಲೂ ಲಕ್ಷ ಲಕ್ಷ ಮೆಡಿಕಲ್ ಬಿಲ್ ಸಲ್ಲಿಸಿ ಹಣ ಪಡೆದಿದ್ದಾರೆ. ಕೋವಿಡ್ ಕಾಲದಲ್ಲಿಯೇ ಬರೋಬ್ಬರಿ 1 ಕೋಟಿಗೂ ಹೆಚ್ಚು ಹಣವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button