ಗುಲಾಬ್‌ನಿಂದ ಮತ್ತೊಂದು ಸೈಕ್ಲೋನ್; ಹಲವೆಡೆ ಮಳೆ
ನವದೆಹಲಿ: ಆಂಧ್ರಪ್ರದೇಶ, ಒಡಿಶಾಗಳಲ್ಲಿ ಬಿರು ಮಳೆಗೆ ಕಾರಣವಾಗಿದ್ದ ಗುಲಾಬ್ ಚಂಡಮಾರುತ ಕೆಲ ಅಂಶ ಅರಬೀ ಸಮುದ್ರ ವ್ಯಾಪ್ತಿ ಪ್ರವೇಶಿಸಿವೆ. ಸೆ. 30ರಂದು ಅವುಗಳು ಪುನಃ ಬಲವರ್ದನೆಗೊಂಡು ಹೊಸ ಚಂಡಮಾರುತವೊಂದಕ್ಕೆ ಸೃಷ್ಟಿ ನೀಡಲಿವೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ತಜ್ಞರು ತಿಳಿಸಿದ್ದಾರೆ.
ಹೊಸ ಚಂಡಮಾರುತದಿಂದ, ಗುಜರಾತ್‌ನ ದಮನ್, ದಿಯು, ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಭಾರಿಯಿಂದ ಅತಿ ಭಾರಿಯಾಗಿ, ಸೌರಾಷ್ಟ್ರ ಹಾಗೂ ಕಛ್
ಪ್ರಾಂತ್ಯಗಳಲ್ಲಿ ಸಾಧಾರಣ ದಿಂದ ಭಾರಿ ಮಳೆಯಾಗಬಹುದು. ಆನಂ ತರ, ಚಂಡ ಮಾರುತ ಪಾಕಿಸ್ತಾನ ಪ್ರವೇಶಿ ಸಲಿದೆ ಎಂದು ತಜ್ಞರು ಹೇಳಿದ್ದಾರೆ.
ಗೋದಾವರಿಯಲ್ಲಿ ಪ್ರವಾಹ: ಮಹಾರಾಷ್ಟ್ರದ ಮರಾಠಾವಾಡ, ಉತ್ತರ ಮಹಾರಾಷ್ಟ್ರ, ವಿದರ್ಭ, ಕೊಂಕಣ ಪ್ರಾಂತ್ಯ, ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಈಗ ಕಡಿಮೆಯಾಗಿದೆ. ಆದರೆ, ಗೋದಾವರಿ ನದಿಯಲ್ಲಿ ಪ್ರವಾಹ ಏರ್ಪಟ್ಟಿದ್ದು, ಆ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಎಲ್ಲಾ ಅಣೆಕಟ್ಟುಗಳ ಕ್ರೆಸ್ಟ್ ಗೇಟ್‌ಗಳನ್ನು ತೆರೆಯಲು ಸೂಚಿಸಲಾಗಿದೆ.
ಪಶ್ಚಿಮ ಬಂಗಾಳದ ಹಲವೆಡೆ ಮಳೆ
ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದ್ದು, ಕೋಲ್ಕತಾದ ಹಲವಾರು ಪ್ರಾಂತ್ಯಗಳು ಮತ್ತು ಸದ್ಯದಲ್ಲೇ ವಿಧಾನಸಭಾ ಉಪಚುನಾವಣೆ ನಡೆಯಲಿರುವ ಭವಾನಿಪುರದ ಹಲವಾರು ಹಳ್ಳಿಗಳು ಜಲಾವೃತವಾಗಿವೆ.