ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಚಿತ್ರಕ್ಕೆ ಕಾರ್ಯಪ್ಪ ಕುಟುಂಬದ ಒಪ್ಪಿಗೆ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಚರಿತ್ರೆ ಆಧರಿಸಿ ಚಿತ್ರ ಮಾಡಲು ಜನರಲ್ ಕಾರ್ಯಪ್ಪ ಕುಟುಂಬ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಅತಿ ಶೀಘ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ವೀರ ಯೋಧನ ಕಥೆ ಹೇಳೋದು ಕನ್ಫರ್ಮ್ ಆಗಿದೆ.
ನಾಡು ಕಂಡ ವೀರ ಯೋಧನ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳಲಿದ್ದು ಸುಮಾರು 400 ರಿಂದ 500 ಕೋಟಿ ರೂ. ವೆಚ್ಚದಲ್ಲಿ ಜನರಲ್ ಕಾರ್ಯಪ್ಪ ಸಿನಿಮಾ ಸೆಟ್ಟೇರಲಿದೆ.

ಚಿತ್ರದ ಆರಂಭಕ್ಕೆ ಮುನ್ನ ಜನರಲ್ ಕಾರ್ಯಪ್ಪ ಫ್ಯಾಮಿಲಿಯನ್ನ ಮಡಿಕೇರಿಯಲ್ಲಿ ಭೇಟಿಯಾದ ಚಿತ್ರತಂಡ ಕಾರ್ಯಪ್ಪ ಕುಟುಂಬದಿಂದ ಕಥೆಗೆ ಒಪ್ಪಿಗೆ ಪಡೆದುಕೊಂಡಿದೆ.
ಏರ್ ಮಾರ್ಷಿಯಲ್ ನಲ್ಲಿ ಸೇವೆ ಸಲ್ಲಿಸಿರುವ ಜನರಲ್ ಕೆ.ಎಮ್ ಕಾರ್ಯಪ್ಪ ಅವರ ಮಗ ನಂದ ಕಾರ್ಯಪ್ಪ ಚಿತ್ರ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ.
ಪ್ರೇಮಂ ಪೂಜ್ಯಂ ಚಿತ್ರದ ತಂಡವೇ ಈ ಚಿತ್ರದಲ್ಲಿದ್ದು ಹಾಲಿವುಡ್ ಸ್ಡುಡಿಯೋ ಜೊತೆಯಲ್ಲಿ ಕನ್ನಡಿಗನ ವೀರಗಾಥೆ ನಿರ್ಮಾಣವಾಗಲಿದೆ.10, 12ನೇ ತರಗತಿ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಮನ್ನಾ ಮಾಡಲು ಒತ್ತಾಯ