ಹಬ್ಬದ ಸಂದರ್ಭಕ್ಕಾಗಿ ಬರೋಬ್ಬರಿ ಒಂದು ಸಾವಿರ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭ

ಬೆಂಗಳೂರು : ಹಬ್ಬಗಳು ಇನ್ನೇನು ಹತ್ತಿರವಿದೆ ಎಂದಾಗ ಬಸ್, ರೈಲು ಸಿಗದೆ ಜನರು ತಮ್ಮ ಊರುಗಳಿಗೆ ತೆರಳಲು ಕಷ್ಟಪಡುತ್ತಾರೆ. ಬಸ್ಸ್ಟಾಂಡ್ಗಳಲ್ಲಿ ಕುಳಿತು ಸೀಟ್ ಇರುವ ಬಸ್ಗಾಗಿ ಕಾದು ಹೈರಾಣಾಗುತ್ತಾರೆ. ಆದರೆ ಈ ಬಾರಿ ಇದ್ಯಾವುದಕ್ಕೂ ಅವಕಾಶ ಇಲ್ಲ, ಏಕೆಂದರೆ ಕೆಎಸ್ಆರ್ಟಿಸಿ ಹಬ್ಬದ ಸಂದರ್ಭಕ್ಕಾಗಿ ಬರೋಬ್ಬರಿ ಒಂದು ಸಾವಿರ ಹೆಚ್ಚುವರಿ ಬಸ್ಗಳ ಸಂಚಾರ ಆರಂಭಿಸಲಿದೆ.
ಬೆಂಗಳೂರಿನಿಂದ 1000 ಹೆಚ್ಚುವರಿ ಬಸ್ಗಳು ಸಂಚರಿಸಲಿದ್ದು, ಸಮಸ್ಯೆಯಿಲ್ಲದೆ ಪ್ರಯಾಣಿಕರು ಊರು ತಲುಪಬಹುದಾಗಿದೆ.
ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಪ್ರತಿ ಬೆಂಗಳೂರಿಗರೂ ತಮ್ಮ ಊರುಗಳಿಗೆ ತೆರಳಲು ಇಚ್ಛಿಸುತ್ತಾರೆ. ಇದೇ ಕಾರಣದಿಂದ ದಸರಾ ಸಂದರ್ಭದಲ್ಲಿ ಅ.13 ರಿಂದ 21 ರವರೆಗೆ, ದೀಪಾವಳಿ ಸಂದರ್ಭದಲ್ಲಿ ಅ.29 ರಿಂದ ನ.7 ರವರೆಗೆ ವಿಶೇಷ ಬಸ್ ಸೌಲಭ್ಯ ಇರುತ್ತದೆ.
ಹೆಚ್ಚುವರಿ ಬಸ್ಗಳು ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಬೀದರ್ ಮುಂತಾದ ಸ್ಥಳಗಳಿಗೆ ತೆರಳುತ್ತವೆ. ಇದಲ್ಲದೆ ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮುಂತಾದ ಸ್ಥಳಗಳಿಗೂ ಬಸ್ಗಳ ಸಂಚಾರ ಇರಲಿದೆ.