ಕೊರೊನಾ 3 ನೇ ಅಲೆ ಆತಂಕದಲ್ಲಿದ್ದವರಿಗೆ ನೆಮ್ಮದಿಯ ಸುದ್ದಿ : ಭಾರತದಲ್ಲಿ ‘Covid R-Value’ 1 ಕ್ಕಿಂತ ಕಡಿಮೆ!
ನವದೆಹಲಿ : ಕೊರೊನಾ 3 ನೇ ಅಲೆ ಆತಂಕದಲ್ಲಿದ್ದ ದೇಶದ ಜನತೆಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ದೇಶಾದ್ಯಂತ ಕೊರೊನಾ ಸೋಂಕಿನ ಪ್ರಸರಣ ವೇಗ ತಗ್ಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರ ತಗ್ಗಿದ್ದು, ರಿಪ್ರೊಡಕ್ಟಿವ್ ವ್ಯಾಲ್ಯೂ ಭಾರೀ ಇಳಿಕೆ ಕಂಡಿದ್ದು, ಆರ್-ವ್ಯಾಲ್ಯೂ 0.92 ದಾಖಲಾಗಿದೆ. 1 ಕ್ಕಿಂತ ಕಡಿಮೆ ಸಂಖ್ಯೆಯ ಆರ್-ವ್ಯಾಲ್ಯೂ ಹೊಂದಿದ್ದರೆ ಅಪಾಯದಿಂದ ಪಾರಾದಂತೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೊನಾ 3 ನೇ ಅಲೆ ಭೀತಿ ಆತಂಕ ಇಲ್ಲ ಎನ್ನಲಾಗಿದೆ.
ದೆಹಲಿ, ಕೇರಳ, ಪುಣೆಯಲ್ಲಿ ಆರ್-ವ್ಯಾಲ್ಯೂ 1 ಕ್ಕಿಂತ ಕಡಿಮೆ ಇದ್ದರೆ, ಬೆಂಗಳೂರಿನಲ್ಲಿ 1.06, ಮುಂಬೈನಲ್ಲಿ 1.09, ಕೋಲ್ಕತ್ತಾದಲ್ಲಿ 1.04, ಚೆನ್ನೈನಲ್ಲಿ 1.11 ಆರ್-ವ್ಯಾಲ್ಯೂ ದಾಖಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 31,923 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ಸೋಂಕಿನಿಂದ ನಿನ್ನೆ ಒಂದೇ ದಿನ 282 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4,46,050 ಕ್ಕೆ ಏರಿಕೆಯಾಗಿದೆ.