ನೆರೆ ಸಂತ್ರಸ್ತರ ಪರಿಹಾರಕ್ಕೆ 35 ಕೋಟಿ ರೂ. ಬಿಡುಗಡೆ : ಅಶೋಕ್
ಬೆಂಗಳೂರು.ಸೆ. 22- ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಒಂದು ವಾರದೊಳಗೆ 35 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಶ್ರೀನಿವಾಸ ಮಾನೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 3 ವರ್ಷ ಗಳಿಂದಲೂ ರಾಜ್ಯ ನಿರಂತರವಾಗಿ ಪ್ರವಾಹಕ್ಕೆ ಸಿಲುಕುತ್ತಿದೆ.
ಎನ್ ಡಿಆರ್ ಎಫ್ ಮಾರ್ಗ ಸೂಚಿ ಅನ್ವಯ 765.84 ಕೋಟಿ ನೆರವು ಕೇಳಿ 2021 ಆಗಸ್ಟ್ 21ರಂದು ಕೇಂದ್ರ ಕ್ಕೆ ಮನವಿ ಸಲ್ಲಿಸಲಾಗಿದೆ. ತದನಂತರ ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಪ್ರವಾಹ ಹಾನಿ ಪರಿಗಣಿಸಿ 841.57 ಕೋಟಿ ರೂ. ನೆರವು ಕೋರಿ ಸೆಪ್ಟೆಂಬರ್ 18ರಂದು ಮನವಿ ಸಲ್ಲಿಸಲಾಗಿದೆ.
ಇದರನ್ವಯ ಕೇಂದ್ರ ಸರ್ಕಾರದ 7 ಜನರ ತಂಡ ರಾಜ್ಯಕ್ಕೆ 2 ಬಾರಿ ಆಗಮಿಸಿ ಪರಿಶೀಲನೆ ನಡೆಸಿದೆ. ಆದರೆ ಆರ್ಥಿಕ ನೆವು ನೀಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ನೆರವಿಗಾಗಿ ಕಾಯದೆ 154.65 ಕೋಟಿ ಹಣವನ್ನು ಬಿಡುಗಡೆ ಮಾಡಿ ತುರ್ತು ಕಾರ್ಯಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ 35 ಕೋಟಿ ಬಿಡುಗಡೆ ಮಾಡಲಾಗುವುದು, ಕೇಂದ್ರ ಸರ್ಕಾರ ದಿಂದ ನೆರವು ಬಂದ ಮೇಲೆ ರಾಜ್ಯ ಸರ್ಕಾರ ಬಿಡುಗಡೆ ಗೊಳಿಸಿದ್ದ ಹಣಕ್ಕೆ ಹೊಂದಾಣಿಕೆ ಮಾಡಲಾಗುವುದು ಸಚಿವ ಅಶೋಕ್ ಹೇಳಿದರು.