ಸುದ್ದಿ

ಕೆರೆ ಹೆಬ್ಬಾರ್, ಮೋಹನ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ : ವಿಭವ್ ಗೆ ನಮ್ಮನೆ ಯುವ ಪುರಸ್ಕಾರ

ಶಿರಸಿ: ಜೀವ ಜಲ ಕಾರ್ಯಪಡೆ ಅಧ್ಯಕ್ಷ ಕೆರೆ ಹೆಬ್ಬಾರ್ ಎಂದೇ ಹೆಸರಾದ ಶ್ರೀನಿವಾಸ ಹೆಬ್ಬಾರ್, ಸೆಲ್ಕೋ ಇಂಡಿಯಾದ ಸಿಇಓ, ತಾಳಮದ್ದಲೆ ಅರ್ಥದಾರಿ ಮೋಹನ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ, ಯುವ ಕಲಾವಿದ ವಿಭವ್ ಮಂಗಳೂರಿಗೆ ನಮ್ಮನೆ ಯುವ ಪುರಸ್ಕಾರ ಪ್ರಕಟವಾಗಿದೆ.

ಜೀವ ಜಲ ಕಾರ್ಯಪಡೆಯ ಮೂಲಕ ನೆಲ, ಜಲ ಸಂರಕ್ಷಣೆಯಲ್ಲಿ, ಸ್ವಚ್ಛತಾ ಅಭಿಯಾನದಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಹೆಬ್ಬಾರ್ ಅವರ ಪರಿಸರ, ಗೋ, ಶೈಕ್ಷಣಿಕ, ಧಾರ್ಮಿಕ ಪ್ರೀತಿಮನಗಂಡು ಈ ಪ್ರಶಸ್ತಿ ನೀಡಲಾಗುತ್ತಿದೆ.

ಸಹಕಾರಿ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಸೀತಾರಾಮ ರಾ.ಹೆಗಡೆ ಅವರ ನೆನಪಿನಲ್ಲಿ ಮೋಹನ ಹೆಗಡೆ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಕುಮಟಾ ತಾಲೂಕಿನ ಹೆರವಟ್ಟ ದವರಾಗಿದ್ದಾರೆ. ದೇಶ ಮಟ್ಟದಲ್ಲಿ ಸೆಲ್ಕೋ ದಂತಹ ಪ್ರಭಾವಿ ಸಂಸ್ಥೆಯ ಸಿಇಓ ಆಗಿ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕçತಿಕ ರಂಗದಲ್ಲಿ ಸಾಮಾಜಿಕ ಕಾಳಜಿ, ಕಳಕಳಿ ವ್ಯಕ್ತಪಡಿಸುತ್ತಿರುವವರಾಗಿದ್ದಾರೆ. ಅವರ ಸಮಗ್ರ ಕೊಡುಗೆ ಗಮನಿಸಿ ನಮ್ಮನೆ ಪ್ರಶಸ್ತಿ ನೀಡಲಾಗುತ್ತಿದೆ.

ಪೆನ್ಸಿಲ್ ಚಿತ್ರ ಕಲಾವಿದ, ಕಿರಿಗಾಮಿ ಕಲೆಯ ಮೂಲಕ ಕತ್ತರಿಯಲ್ಲಿ ಕೈ ಚಳಕ ಮೂಡಿಸುವ ಯುವಕ ವಿಭವ ಮಂಗಳೂರು ಅವರಿಗೆ ನಮ್ಮನೆ ಯುವ ಪುರಸ್ಕಾರ ನೀಡಲಾಗುತ್ತಿದೆ. ಈಗಾಗಲೇ ಆರ್ಯ ಭಟ ಪ್ರಶಸ್ತಿ, ಮೇದಿನಿಮಿಯಾಡ್ಸ್೯ ಪುರಸ್ಜಾರ ಲಭಿಸಿದೆ.

ಬಿ ಎಸ್ಸಿ ಪದವಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಾನೆ. ಪ್ರಶಸ್ತಿಗೆ ಯಾವುದೆ ಅರ್ಜಿ ಸ್ವೀಕರಿಸದೇ ಆಯ್ಕೆ ಸಮಿತಿ ಸಾಧಕರ ಗುರುತಿಸುವ ಕಾರ್ಯ ಮಾಡುತ್ತಿದೆ ಎಂಬುದು ಉಲ್ಲೇಖನೀಯ.

ಪ್ರಶಸ್ತಿ ಪ್ರದಾನ ಸಮಾರಂಭವು ಡಿ.13ಕ್ಕೆ ವಿಶ್ವಶಾಂತಿ ಸೇವಾ ಟ್ರಸ್ಟ ನಡೆಸುವ ನಮ್ಮನೆ ಹಬ್ಬದ ಸಮಾರಂಭದಲ್ಲಿ ನಡೆಯಲಿದೆ. ಪ್ರಶಸ್ತಿ ಫಲಕ, ಸಮ್ಮಾನ ಪತ್ರ, ನಗದು ಸಹಿತ ಒಳಗೊಂಡಿದೆ.

ನಮ್ಮನೆ ಹಬ್ಬಕ್ಕೆ ಈ ವರ್ಷ ದಶಮಾನೋತ್ಸವ ವರ್ಷ ಆಗಿದ್ದು, ಕಳೆದ 9 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ವಾತಾವರಣ ಉಳಿಸಬೇಕು ಎಂದು ಹಬ್ಬ ನಡೆಸಲಾಗುತ್ತಿದೆ. ಪ್ರತೀ ವರ್ಷ ಸಮಾಜಮುಖಿಯಾಗಿ ತೊಡಗಿಕೊಂಡ ಇಬ್ಬರು ಸಾಧಕರಿಗೆ, ಓರ್ವ ಯುವ ಪ್ರತಿಭೆಗೆ ಪ್ರಶಸ್ತಿ ನೀಡಲಾಗುತ್ತಿದೆ. ನಾಡಿನ ಹೆಸರಾಂತ ಸಾಹಿತಿ, ಕಲಾವಿದರನ್ನು ಆಹ್ವಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button