ಸುದ್ದಿ
ಆರ್ ಹೆಚ್ ಒನ್ ಕ್ಯಾಂಪ್ ಗ್ರಾಮ ಪಂಚಾಯಿತಿಗೆ ಸೋಲಾರ್ ಬೀದಿ ದೀಪ ಅಳವಡಿಕೆ ಸಹಕಾರಿ : ಎಂ ರೆಹಿಮತ್ ಪಾಷ

ಸಿಂಧನೂರು : ತಾಲೂಕಿನ ಆರ್ ಹೆಚ್ ಒನ್ ಕ್ಯಾಂಪ್
ಗ್ರಾಮ ಪಂಚಾಯಿತಿಗೆ ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ಎಂಟು ಲಕ್ಷ ರೂ.ಅನುದಾನದಲ್ಲಿ ಸೋಲಾರ್ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ ರೆಹಿಮತ್ ಪಾಷ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಆರ್ ಹೆಚ್ ಒನ್ ಕ್ಯಾಂಪ್ ಗ್ರಾಮ ಪಂಚಾಯಿತಿಗೆ ಸೋಲಾರ್ ಬೀದಿ ದೀಪ ಅಳವಡಿಕೆ ಸಹಕಾರಿಯಾಗಿದೆ ಇನ್ನೂ ಮುಂದೆ ನಮ್ಮ ಗ್ರಾಮವನ್ನು ಸಂಪೂರ್ಣ ಕತ್ತಲೆಯಿಂದ ಮುಕ್ತಿಗೊಳಿಸುವ ಮೂಲಕ ಸೋಲರ್ ವಿದ್ಯುತ್ ಬಳಸಿ ಸ್ವಾವಲಂಬನೆಯತ್ತ ಗ್ರಾಮ ಪಂಚಾಯಿತಿಯು ಮುನ್ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಬುಗೌಡ ಬಾದರ್ಲಿ,ಗ್ರಾ.ಪಂ.ಸದಸ್ಯ ಬಸನಗೌಡ, ಮುಖಂಡರಾದ ರಾಮಣ್ಣ, ಶ್ರೀನಿವಾಸ,ಅಭಿವೃದ್ಧಿ ಅಧಿಕಾರಿ ಬಸವರಾಜ ಎನ್ ರೈತನಗರ, ರಾಜಶೇಖರ,
ಮಣಿಕಂಠ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು,ಸಿಬ್ಬಂದಿ ವರ್ಗ,ಹಾಗೂ ಊರಿನ ಪ್ರಮುಖ ಇದ್ದರೂ.