ಪ್ರಿಯಾಂಕಾ ಜೈನ್ ತಂಡದಿಂದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ…….

ಕಾನೂನು ಕ್ರಮಕ್ಕೆ ಒತ್ತಾಯಿಸಿ 19 ಜನರಿಂದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ದೂರು…..
ಹೊಸಪೇಟೆ ತಾಲೂಕಿನಲ್ಲಿ ಇತ್ತೀಚಿಗೆ ಹಣ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕಾಗಿ ಪೋಲೀಸ್ ಇಲಾಖೆ ಏನೆಲ್ಲಾ ಕಾನೂನು ಕ್ರಮ ಕೈಗೊಂಡರೂ ಸಹ,ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೊಸಪೇಟೆ ನಗರದಲ್ಲಿ ಪ್ರಿಯಾಂಕಾ ಮಹಿಳಾ ಪತ್ತಿನ ಸಹಕಾರ ಸಂಘ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡು, ಪ್ರಾರಂಭದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಂಪರ್ಕ ಮಾಡಿ , ಉಚಿತವಾಗಿ ಟೈಲರಿಂಗ್ ತರಬೇತಿ , ಕಂಪ್ಯೂಟರ್ ತರಬೇತಿ ನೀಡುವ ಮೂಲಕ ನಂಬಿಕೆ ಹುಟ್ಟಿಸಿ,ಆನಂತರ ಕೇಂದ್ರ ಸರ್ಕಾರಗಳಿಂದ ಸಬ್ಸಿಡಿ ಸಾಲ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿದ ಪ್ರಕರಣ ನಡೆದಿದೆ.
ವಂಚನೆಗೆ ಒಳಗಾದ ಸ್ವಸಹಾಯ ಸಂಘಗಳ ಮಹಿಳೆಯರು ಮತ್ತು ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಸೇರಿದಂತೆ ಇಂದು 19 ಜನ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಮಹಿಳಾ ಪತ್ತಿನ ಸಹಕಾರ ಸಂಘದ ಪ್ರಿಯಾಂಕಾ ಜೈನ್, ಶ್ರೀ ತಾಯಮ್ಮ ದೇವಿ ಶಕ್ತಿ ಸಂಘದ ಅಧ್ಯಕ್ಷರಾದ ಶ್ರೀಮತಿ ಕವಿತಾ ಈಶ್ವರ ಸಿಂಗ್ ಮತ್ತು ಇವರ ಆಪ್ತ ಸಹಾಯಕರಾದ ಲಲಿತಮ್ಮ ಹಾಗು ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಇವರಿಂದ ಹಣ ವಸೂಲಿ ಮಾಡಿ ಕೊಡಬೇಕೆಂದು ದೂರು ಸಲ್ಲಿಸಿದ್ದಾರೆ.
ಸಿಪಿಎಂ ಮುಖಂಡರಾದ ಭಾಸ್ಕರ್ ರೆಡ್ಡಿ, ಯಲ್ಲಾಲಿಂಗ, ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಮರಡಿ.ಜಂಬಯ್ಯನಾಯಕ,ಬಿ.ತಾಯಪ್ಪನಾಯಕ,ಬಿ.ರಮೇಶ್ ಕುಮಾರ್, ಸೂರ್ಯನಾರಾಯಣ, ಡಿವೈಎಫ್ಐ ಮುಖಂಡರಾದ ಈಡಿಗರ.ಮಂಜುನಾಥ,ವಡ್ರಳ್ಳಿ.ಸ್ವಾಮಿ,ತಿರುಕಪ್ಪ ಮುಂತಾದವರು ಉಪಸ್ಥಿತರಿದ್ದು,ಆರೋಪಿತರಿಗೆ ಪ್ರಭಾವಶಾಲಿ ರಾಜಕಾರಣಿಗಳ ಸಂಪರ್ಕ ಇರುವುದರಿಂದ, ದೂರು ಸಲ್ಲಿಸಿದ 19 ಜನ ಅಮಾಯಕರಿಗೆ ಸೂಕ್ತ ಪೋಲೀಸ್ ರಕ್ಷಣೆ ನೀಡಬೇಕೆಂದು ಪೋಲೀಸ್ ಇಲಾಖೆಗೆ ಒತ್ತಾಯಿಸಿದರು………
………
