ಗೂಡ್ಸ್ ವಾಹನಗಳಿಗೆ ಟೋಲ್ ಫ್ರೀ ಮಾಡಲು ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಿಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಚಾಮರಾಜನಗರ: ಗೂಡ್ಸ್ ವಾಹನ ಚಾಲಕರು ಮತ್ತು ಮಾಲೀಕರಿಂದ ಗೂಡ್ಸ್ ವಾಹನಗಳಿಗೆ ಟೋಲ್ ಫ್ರೀ ಮಾಡಬೇಕೆಂದು ಗೂಡ್ಸ್ ವಾಹನ ಚಾಲಕರು ಮತ್ತು ಮಾಲೀಕರಿಂದ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪನಾಗ್ ಅವರಿಗೆ ಜಿಲ್ಲಾಡಳಿತ ಭವನದಲ್ಲಿ ಇಂದು ಮನವಿ ಸಲ್ಲಿಸಲಾಯಿತು

ಇದೇ ವೇಳೆ ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಮಾತನಾಡಿ, ತಾಲೂಕಿನ ಅಟ್ಟುಗುಳಿಪುರದಲ್ಲಿ ಗೂಡ್ಸ್ ವಾಹನ ಸವಾರರಿಗೆ ಟೋಲ್ ವಿಧಿಸುತ್ತಿರುವುದರಿಂದ ಗೂಡ್ಸ್ ವಾಹನ ಚಾಲಕರು ಮತ್ತು ಮಾಲೀಕರಿಗೆ ತುಂಬಾ ಅನ್ಯಾಯವಾಗುತ್ತಿದೆ. ಸರ್ಕಾರದ ಕಾನೂನಿನ ಅನ್ವಯ ಟೋಲ್ ವಿಧಿಸಲಿ ಆದರೆ ಸ್ಥಳೀಯರಿಗೆ ಟೋಲ್ ಫ್ರೀ ಮಾಡಬೇಕು. ಸುತ್ತಮುತ್ತಲಿನ ಗ್ರಾಮಗಳಿಗೆ ಗೂಡ್ಸ್ ಸಾಗಿಸಲು ಕಡಿಮೆ ಬಾಡಿಗೆ ಕಡಿಮೆ ಹಣ ಪಡೆಯುತ್ತಾರೆ, ಆ ಹಣವನ್ನು ಟೋಲ್ ವಿರೋಧಿಸುವವರಿಗೆ ನೀಡಿದರೆ ಗೂಡ್ಸ್ ವಾಹನ ಸವಾರರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಟೋಲ್ ವಿಧಿಸುವುದನ್ನು ನಿಲ್ಲಿಸಬೇಕು. ಗುಂಡ್ಲುಪೇಟೆ,ನರಸೀಪುರ, ಮೈಸೂರು ಸೇರಿದಂತೆ ಇತರೆ ಟೋಲ್ ಗೇಟ್ ಗಳಲ್ಲಿ ಟೋಲ್ ಫ್ರೀ ಮಾಡಿ ಗೂಡ್ಸ್ ವಾಹನ ಮತ್ತು ಚಾಲಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅದರಂತೆ ಇಲ್ಲಿಯೂ ಟೋಲ್ ಫ್ರೀ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಕೆಸ್ತೂರು ಮರಪ್ಪ,ರಂಗಸ್ವಾಮಿ. ಸಿ.ಹೆಚ್, ವಿನೋದ್ ಕುಮಾರ್, ರಮೀಜ್, ಜ್ಯೋತಿಲಿಂಗಯ್ಯ, ಚಂದು, ಮನೋಜ್, ಸಿದ್ದು, ನಿಂಗಪ್ಪ, ರವಿ, ಮಹೇಶ್, ಸಂಜಯ್, ಸಿದ್ದರಾಜು, ಮಹೇಂದ್ರ, ರಾಜೇಶ್, ರಾಜು, ರವಿ ಸೇರಿದಂತೆ ಇತರರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ