ತಂತ್ರಜ್ಞಾನ

ಮೋಸ ಹೋಗುವುದು ತಪ್ಪಿಸಲು ಏರ್‌ಟೆಲ್‌ನಿಂದ ಗ್ರಾಹಕರಿಗೆ ಫ್ರಾಡ್‌ ಡಿಟೆಕ್ಷನ್ ಉಚಿತ ಸೇವೆ

ಮೊಬೈಲ್ ಬಳಕೆದಾರರು ನಕಲಿ, ವಂಚನೆ ಜಾಲತಾಣ, ಲಿಂಕ್‌ಗಳಿಂದ ಗ್ರಾಹಕರು ಭಾರಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದಕ್ಕೆ ಪರಿಹಾರ ಸೂಚಿಸಲು ಏರ್‌ಟೆಲ್ ಇದೀಗ ವಿಶ್ವದ ಮೊದಲ ಫ್ರಾಡ್ ಡಿಟೆಕ್ಷನ್ ಎಐ ತಂತ್ರಜ್ಞಾನ ಜಾರಿ ಮಾಡಿದೆ. ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಗ್ರಾಹಕರು ಈ ಸೇವೆ ಬಳಸಿಕೊಳ್ಳಬಹುದು.

ಮೊಬೈಲ್ ಬಳಕೆದಾರರು ನಕಲಿ ಲಿಂಕ್, ಅಥಾವ ವೆಬ್‌ಸೈಟ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಘಟನೆ, ಇತರ ನಕಲಿ ಜಾಲತಾಣಗಳಿಂದ ಮೋಸ ಹೋದ ಘಟನೆ ಸೇರಿದಂತೆ ಹಲವು ವಂಚನೆಯಲ್ಲಿ ಸಿಲುಕಿದ ಘಟನೆಗಳು ವರದಿಯಾಗಿದೆ. ಬಳಕೆದಾರರಿಗೆ ನಕಲಿ ಯಾವುದು, ವಂಚನೆ ಜಾಲತಾಣ ಯಾವುದು ಅನ್ನೋದು ಅರಿವಾಗುವಷ್ಟರಲ್ಲಿ ಮೋಸ ಹೋಗಿರುತ್ತಾರೆ. ಇದೀಗ ಗ್ರಾಹಕರನ್ನು ಸುರಕ್ಷಿತವಾಗಿರಿಸಲು ಏರ್‌ಟೆಲ್ ವಿಶ್ವದ ಮೊದಲ ಎಐ ಚಾಲಿತ ಫ್ರಾಡ್ ಡಿಟೆಕ್ಷನ್ ತಂತ್ರಜ್ಞಾನ ಪರಿಚಿಯಿಸಿದೆ.

ಸ್ಪ್ಯಾಮ್ ವಿರುದ್ಧ ಏರ್‌ಟೆಲ್ ತನ್ನ ಹೋರಾಟ ಮುಂದುವರಿಸಿದೆ. ಏರ್‌ಟೆಲ್ ಇದೀಗ ವಾಟ್ಸಾಪ್, ಟೆಲಿಗ್ರಾಮ್, ಫೇಸ್‌ಬುಕ್, ಇನಸ್ಟಾಗ್ರಾಮ್, ಎಸ್‌ಎಂಎಸ್ ರೀತಿಯ ಓಟಿಟಿಗಳು, ಇಮೇಲ್ ಗಳು, ಬ್ರೌಸರ್ ಸೇರಿದಂತೆ ವೇದಿಕೆಗಳು ಮತ್ತು ಓವರ್-ದಿ-ಟಾಪ್(ಓಟಿಟಿ) ಆಪ್ಸ್ ಮತ್ತು ಎಲ್ಲಾ ಸಂವಹನ ವೇದಿಕೆಗಳಾದ್ಯಂತ ರಿಯಲ್ ಟೈಮ್ ನಲ್ಲಿ ನಕಲಿ ಮತ್ತು ಮೋಸದ ಜಾಲತಾಣಗಳನ್ನು ಪತ್ತೆಮಾಡುವ ಮತ್ತು ನಿರ್ಬಂಧಿಸುವ ನವೀನ ತಂತ್ರಜ್ಞಾನ ಪರಿಹಾರವೊಂದನ್ನು ಪರಿಚಯಿಸುತ್ತಿದೆ.

ಈ ಸುರಕ್ಷಿತ ಸೇವೆಯನ್ನು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಎಲ್ಲಾ ಏರ್‌ಟೆಲ್ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ನೀಡುತ್ತಿದೆ. ಸಾಟಿಯಿಲ್ಲದೆ ಸಂಯೋಜಿಸಿ, ಸ್ವಯಂ-ಸಕ್ರಿಯಗೊಳಿಸಲಾಗುತ್ತದೆ. ಏರ್‌ಟೆಲ್ ನ ಸುಧಾರಿತ ಭದ್ರತಾ ವ್ಯವಸ್ಥೆಯ ಮೂಲಕ ಮೋಸ ಅಥವಾ ನಕಲಿ ಎಂದು ಗುರುತಿಸಲ್ಪಟ್ಟ ಜಾಲತಾಣವನ್ನು ಒಬ್ಬ ಗ್ರಾಹಕನು ಪ್ರವೇಶಿಸಲು ಬಯಸಿದರೆ, ಪೇಜ್ ಲೋಡ್ ಆಗುವುದು ನಿರ್ಬಂಧವಾಗುತ್ತದೆ. ನಿರ್ಬಂಧದ ಕಾರಣವನ್ನು ವಿವರಿಸುವ ಪೇಜ್‌ಗೆ ಗ್ರಾಹಕರನ್ನು ನಿರ್ದೇಶಿಸಲಾಗುತ್ತದೆ. ಸದ್ಯ ಈ ಸೇವೆಯು ಹರಿಯಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿದ್ದು, ಅತಿ ಶೀಘ್ರದಲ್ಲಿಯೇ ದೇಶಾದ್ಯಂತ ಸಹ ಲಭ್ಯವಾಗಲಿದೆ.

ಡಿಜಿಟಲ್ ವೇದಿಕೆಗಳು ದೇಶಾದ್ಯಂತ ಹೆಚ್ಚು ಸರ್ವತ್ರವಾಗಿರುತ್ತಿರುವುದರಿಂದ ಪ್ರತಿ ದಿನ ಆನ್ಲೈನ್ ವಂಚನೆಯ ಬೆದರಿಕೆ ಹೆಚ್ಚಾಗುತ್ತಿದೆ ಮತ್ತು ಗ್ರಾಹಕರಿಗೆ ಗಂಭೀರ ಅಪಾಯವನ್ನು ಒಡ್ಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಅಂತಹ ಬೆದರಿಕೆಗಳಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ವಂಚನೆಯ ಸ್ಕೀಮ್ ಗಳು ಒಟಿಪಿ ವಂಚನೆಗಳು ಮತ್ತು ಮೋಸದ ಕರೆಗಳನ್ನು ಮೀರಿ ಬೆಳೆದು ನಿಂತಿವೆ, ಈ ಮೂಲಕ ವಂಚನೆಯ ಆನ್ಲೈನ್ ಸ್ಕೀಮ್ ಗಳಿಗೆ ಸಹಸ್ರಾರು ಜನರು ಬಲಿಪಶುಗಳಾಗಿರುವುದನ್ನು ಇತ್ತೀಚಿನ ವರದಿಗಳಲ್ಲಿ ಕಾಣಬಹುದು.

ಈ ಸಮಸ್ಯೆಯ ಆಳವನ್ನು ಗುರುತಿಸಿ, ಏರ್‌ಟೆಲ್ ಒಂದು ಎಐ-ಚಾಲಿತ, ಬಹು-ಹಂತವುಳ್ಳ ಬುದ್ದಿವಂತಿಕೆ ವೇದಿಕೆಯನ್ನು ಅಳವಡಿಸಿದ್ದು, ಇದು ಮೋಸ ಮತ್ತು ವಂಚನೆಯ ಸಮಗ್ರ ಜಾಲದಿಂದ ಗ್ರಾಹಕರನ್ನು ಸುರಕ್ಷಿತವಾಗಿಡುತ್ತದೆ. ಇದು ಸಾಧನಗಳಾದ್ಯಂತ ಲಿಂಕ್ ಬ್ಲಾಕ್ ಮಾಡುವುದು ಮತ್ತು ಎಲ್ಲಾ ವೇದಿಕೆಗಳಾದ್ಯಂತ ಡೊಮೇನ್ ಫಿಲ್ಟರ್ ಮಾಡುವ ಮೂಲಕ ಅತ್ಯಾಧುನಿಕ ಬೆದರಿಕೆ ಪತ್ತೆಹಚ್ಚುವಿಕೆ ವೇದಿಕೆಯನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.

ಕಳೆದ ಕೆಲವು ವರ್ಷಗಳಿಂದ, ಅಪರಾಧಿಗಳು ಅನೇಕ ಗ್ರಾಹಕರ ಕಷ್ಟಪಟ್ಟ ಹಣವನ್ನು ಅವರಿಗೆ ತಿಳಿಯದಂತೆಯೇ ಲಪಟಾಯಿಸಿರುವುದನ್ನು ನಾವು ನೋಡಿದ್ದೇವೆ. ನಮ್ಮ ಫ್ರಾಡ್ ಡಿಟೆಕ್ಷನ್ ಸೊಲ್ಯೂಷನ್ ನ ಪರಿಚಯದ ಮೂಲಕ ನಮ್ಮ ಇಂಜಿನಿಯರುಗಳು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಿದ್ದಾರೆ ಎಂದು ಭಾರತಿ ಏರ್‌ಟೆಲ್ ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಠ್ಠಲ್ ಹೇಳಿದ್ದಾರೆ. ನಮ್ಮ ಗ್ರಾಹಕರು ಮೋಸಕ್ಕೆ ಬಲಿಯಾಗುವ ಚಿಂತೆಯನ್ನು ಬಿಟ್ಟು ಇಂಟರ್ನೆಟ್ ಬ್ರೌಸ್ ಮಾಡುವಾಗ ಇದು ಸಂಪೂರ್ಣ ನೆಮ್ಮದಿ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಎಐ ಆಧಾರಿತ ಸಾಧನವು ಇಂಟರ್ನೆಟ್ ದಟ್ಟಣೆಯನ್ನು ತಪಾಸಣೆ ಮಾಡುತ್ತದೆ, ಜಾಗತಿಕ ರೆಪೊಸಿಟರಿಗಳೊಂದಿಗೆ ಮತ್ತು ರಿಯಲ್ ಟೈಮ್ ನಲ್ಲಿ ಬೆದರಿಕೆ ಪಾತ್ರಧಾರಿಗಳ ನಮ್ಮ ಸ್ವಂತದ ಡೇಟಾಬೇಸ್ ಪರಿಶೀಲಿಸುತ್ತದೆ ಮತ್ತು ವಂಚನೆಯ ಜಾಲತಾಣಗಳನ್ನು ನಿರ್ಬಂಧಿಸುತ್ತದೆ. ನಮ್ಮ ಈ ಸೊಲ್ಯೂಷನ್ 6 ತಿಂಗಳ ಪ್ರಾಯೋಗಿಕ ಸಮಯದಲ್ಲಿ ಗಮನಾರ್ಹ ಮಟ್ಟದ ನಿಖರತೆಯನ್ನು ಈಗಾಗಲೇ ತಲುಪಿದೆ. ನಮ್ಮ ನೆಟ್‌ವರ್ಕ್‌ಗಳನ್ನು ಸ್ಪ್ಯಾಮ್ ಮತ್ತು ಹಗರಣಗಳಿಂದ ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ನಾವು ಅವಿರತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button