HEALTH | dragon fruit ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ಇದೆ ಗೊತ್ತಾ?

ಡ್ರ್ಯಾಗನ್ ಫ್ರೂಟ್ ಅಥವಾ ಪಿತಾಯಾ (pitaya) ಎಂದೂ ಕರೆಯಲಾಗುವ ಈ ಹಣ್ಣು ತನ್ನ ವಿಶಿಷ್ಟ ಬಣ್ಣ ಮತ್ತು ರುಚಿಗೆ ಪ್ರಸಿದ್ಧವಾಗಿದೆ. ಈ ಹಣ್ಣು ಕೇವಲ ರುಚಿಕರವಲ್ಲದೆ, ಆರೋಗ್ಯಕ್ಕೆ ಬಹುಪಾಲು ಲಾಭಗಳನ್ನು ನೀಡುತ್ತದೆ. ಇದು ಹೈ ನ್ಯೂಟ್ರಿಷನ್ ಮೌಲ್ಯ ಹೊಂದಿರುವ ಹಣ್ಣುಗಳಲ್ಲಿ ಒಂದು.
ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಡ್ರ್ಯಾಗನ್ ಫ್ರೂಟ್ನಲ್ಲಿ ವಿಟಮಿನ್ C ಹೆಚ್ಚು ಪ್ರಮಾಣದಲ್ಲಿದ್ದು, ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸೋಂಕುಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಈ ಹಣ್ಣಿನಲ್ಲಿ ಫೈಬರ್ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಮಲಬದ್ಧತೆಯನ್ನು ನಿವಾರಣೆಯಾಗಿ ಮಾಡುತ್ತದೆ. ಹಾಗೂ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಹೃದಯ ಆರೋಗ್ಯಕ್ಕೆ ಲಾಭದಾಯಕ:
ಡ್ರ್ಯಾಗನ್ ಫ್ರೂಟ್ನಲ್ಲಿರುವ ಆಂಟಿಆಕ್ಸಿಡೆಂಟ್ಗಳು ಆರೋಗ್ಯಕರ ಕೊಬ್ಬು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆಮಾಡುತ್ತದೆ.
ರಕ್ತದಲ್ಲಿ ಸಕ್ಕರೆ ನಿಯಂತ್ರಣ:
ಫೈಬರ್ ಸಮೃದ್ಧ ಡ್ರ್ಯಾಗನ್ ಫ್ರೂಟ್ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದು ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ.

ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ:
ವಿಟಮಿನ್ C, ಆಂಟಿಆಕ್ಸಿಡೆಂಟ್ಗಳು ಚರ್ಮದ ಕೋಶ ಪುನರ್ ನಿರ್ಮಾಣಕ್ಕೆ ಸಹಾಯಮಾಡಿ ತಾಜಾ ಹಾಗೂ ಉತ್ತಮ ಚರ್ಮ ರೂಪುಗೊಳ್ಳಲು ಸಹಕಾರಿ.
