IPL 2025: ಸ್ಥಗಿತಗೊಂಡಿದ್ದ ಐಪಿಎಲ್ ಪುನಾರಂಭ; ಆರ್ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಭಾರತ ಹಾಗೂ ಪಾಕ್ ಬಿಕ್ಕಟ್ಟಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪುನಾರಂಭವಾಗುವ ಸಮಯ ನಿಗದಿಯಾಗಿದೆ.
ಮೇ 17ರಿಂದ ಈ ಬಾರಿಯ ಐಪಿಎಲ್ನ ಲೀಗ್ ಹಂತದ ಉಳಿದ 17 ಪಂದ್ಯಗಳು ಆರಂಭವಾಗಲಿದ್ದು, ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ.
ಇನ್ನು ಲೀಗ್ ಹಂತದ ಉಳಿದ 17 ಪಂದ್ಯಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಪ್ಲೇಆಫ್ ಪ್ರವೇಶಿಸುವುದರ ಜೊತೆಗೆ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳನ್ನು ಪಡೆಯುವತ್ತ ಚಿತ್ತ ನೆಟ್ಟಿದೆ.
ಪುನಾರಂಭವಾಗುತ್ತಿರುವ ಟೂರ್ನಿಯ ಪ್ರಥಮ ಮೇ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿದೆ. ಆರ್ಸಿಬಿಯ ಎಲ್ಲ ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ ಮುಂದಿದೆ.
ಮೇ 17 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೊಲ್ಕತ್ತಾ ನೈಟ್ ರೈಡರ್ಸ್ – ಬೆಂಗಳೂರು
23 ಮೇ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ರೈಸರ್ಸ್ ಹೈದರಾಬಾದ್ – ಬೆಂಗಳೂರು
27 ಮೇ – ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಲಕ್ನೋ
ಸಂಪೂರ್ಣ ವೇಳಾಪಟ್ಟಿ
18 ಮೇ – 3.30 – ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ – ಜೈಪುರ
– 7.30 – ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟನ್ಸ್ – ಡೆಲ್ಲಿ
19 ಮೇ – ಲಕ್ನೋ ಸೂಪರ್ ಜೈಂಟ್ಸ್ vs ಸನ್ರೈಸರ್ಸ್ ಹೈದರಾಬಾದ್ – ಲಕ್ನೋ
20 ಮೇ – ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ – ಡೆಲ್ಲಿ
21 ಮೇ – ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಮುಂಬೈ
22 ಮೇ – ಗುಜರಾತ್ ಟೈಟನ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಅಹ್ಮದಾಬಾದ್
23 ಮೇ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ರೈಸರ್ಸ್ ಹೈದರಾಬಾದ್ – ಬೆಂಗಳೂರು
24 ಮೇ – ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಜೈಪುರ
25 ಮೇ – 3.30 – ಗುಜರಾತ್ ಟೈಟನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಅಹ್ಮದಾಬಾದ್
– 7.30 – ಸನ್ರೈಸರ್ಸ್ ಹೈದರಾಬಾದ್ vs ಕೊಲ್ಕತ್ತಾ ನೈಟ್ ರೈಡರ್ಸ್ – ಡೆಲ್ಲಿ
26 ಮೇ – ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಜೈಪುರ
27 ಮೇ – ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಲಕ್ನೋ
29 ಮೇ – ಕ್ವಾಲಿಫಯರ್ 1
30 ಮೇ – ಎಲಿಮಿನೇಟರ್
1 ಜೂನ್ – ಕ್ವಾಲಿಫಯರ್ 2
3 ಜೂನ್ – ಫೈನಲ್ ಪಂದ್ಯ