ರಾಜ್ಯ

ಯುದ್ಧದ ಕ್ರೆಡಿಟ್ ಸೇನೆಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಕ್ಲೈಂ ಮಾಡಬಾರದು: ಸಿದ್ದರಾಮಯ್ಯ

ಮೈಸೂರು : ಯುದ್ಧದ ಕ್ರೆಡಿಟ್ ಸೇನೆಯವ್ರಿಗೆ ಮಾತ್ರ ಸಲ್ಲಬೇಕು ಅದು ಬಿಟ್ಟು ಯಾವ ಪಕ್ಷವೂ ಅದನ್ನ ಕ್ಲೈಂ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮೈಸೂರಿನ ಎಚ್.ಡಿ.ಕೋಟೆಯಲ್ಲಿ ಹೇಳಿಕೆ ನೀಡಿದ ಅವರು ಯುದ್ಧದ ಕ್ರೆಡಿಟ್ ಸೇನೆಯವ್ರಿಗೆ ಮಾತ್ರ ಸಲ್ಲಬೇಕು ಇವತ್ತು ಎರಡೂ ದೇಶದ ಡಿಜಿಎಂ ಗಳ ಸಭೆ ಇದೆ.

ಸಭೆಯಲ್ಲಿ ಏನು ತಿರ್ಮಾನ ಆಗುತ್ತದೆ ನೋಡೋಣ ಎಂದು ಹೇಳಿದರು.

1971ರ ಯುದ್ಧಕ್ಕೂ ಇವತ್ತಿನ ಸಂದರ್ಭಕ್ಕೂ ನಾನು ಹೋಲಿಕೆ ಮಾಡಿ ಮಾತನಾಡುವುದಿಲ್ಲ. ಅವತ್ತಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ. ಟ್ರಪ್ ಟ್ವಿಟ್ ಬಗ್ಗೆಯಾಗಲಿ, ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಬಗ್ಗೆಯಾಲಿ ನಾನು ಮಾತನಾಡುವುದಿಲ್ಲ. ನನ್ನ ಮಾತನ್ನ ಸೀಜ್ ಫೈರಿಂಗ್ ಅಷ್ಟೇ ಸಿಮಿತ ಗೊಳಿಸುತ್ತೇನೆ‌ ಎಂದರು.

ಕದನ ವಿರಾಮ ಘೋಷಣೆಗೂ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆಮಾಡಿ ನಿರ್ಧಾರ ಪ್ರಕಟಿಸಬಹುದಿತ್ತು ಆದರೆ ಅದನ್ನು ಮಾಡಲಿಲ್ಲ ಎಂದ ಅವರು ರಾಜ್ಯದಲ್ಲಿನ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನ ಹೊರಗೆ ಕಳುಹಿಸಿದ್ದೇವೆ‌ ಮೈಸೂರಿನಲ್ಲಿ ಮೂರು ಮಕ್ಕಳು ಮಾತ್ರ ಇದ್ದಾರೆ. ಅವರನ್ನ ಹೊರಗೆ ಕಳುಹಿಸಲು ತಾಂತ್ರಿಕ ಸಮಸ್ಯೆ ಇವೆ‌ ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವಳು ಹೀಗಾಗಿ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಮಕ್ಕಳು ಮಾತ್ರ ಇಲ್ಲೆ ಇದ್ದಾರೆ ಎಂದು ಹೇಳಿದರು.

ಇನ್ನು ಸಂಪುಟ ಪುನಾರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ನೀವು ಮಾಡ್ತೀರಾ ಸಂಪುಟ ಪುನಾರಚನೆ ನಾನೇ ಮಾಡಬೇಕು, ಪುನಾರಚನೆ ಮಾಡುವಾಗ ನಿಮಗೆ ಹೇಳಿಯೇ ಪುನಾರಚನೆ ಮಾಡುತ್ತೇನೆ. ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತೇವೆ. ಯುದ್ದ ವಿರಾಮ ಘೋಷಣೆ ಆಗಿರೋ ಕಾರಣ ಈ ಕಾರ್ಯಕ್ರಮ ಮಾಡುತ್ತೇವೆ.
ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮದು ಮಾತ್ರ. ಇದೇ ನಮ್ಮ ಸರ್ಕಾರದ ಯಶಸ್ಸು ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button