ಇತ್ತೀಚಿನ ಸುದ್ದಿ

ಜಾತಿಗಣತಿಗೆ ಗಣತಿದಾರರು ಮನೆಗೆ ಬಂದಾಗ ಅಗತ್ಯ ದಾಖಲೆ ಒದಗಿಸಿ : ಮಾರುತಿ ಜಿನ್ನಾಪುರ ಮನವಿ.

ಮಸ್ಕಿ : ಜಾತಿಗಣತಿಗೆ ಗಣತಿದಾರರು ಮನೆಗೆ ಬಂದಾಗ ಅಗತ್ಯ ದಾಖಲೆ ಮತ್ತು ಮೂಲ ಉದ್ಯೋಗ, ಜಾತಿ, ಮನೆಯ ಸದಸ್ಯರ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸ ಬೇಕುಎಂದು
ಕೆ.ಆರ್ ಎಸ್ ಸಂಘಟನೆ ಮಸ್ಕಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪುರ ರವರು
ತಿಳಿಸಿದರು.

ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಮುಂದಿನ ಪೀಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹಾಗೂ ಮೀಸಲಾತಿ ಹಕ್ಕು ಪಡೆಯಬೇಕಾಗಿದೆ. ಸರ್ಕಾರ ಮೇ 5ರಿಂದ 17ರ ವರೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್ .ನಾಗಮೋಹನ್‌ ದಾಸ್‌ ಅಧ್ಯಕ್ಷತೆಯಲ್ಲಿ ಜಾತಿ ಜನಗಣತಿ ನಡೆಯಲಿದೆ. ಜಾತಿ ಜನಗಣತಿಗೆ ಗಣತಿದಾರರು ಮನೆಗೆ ಬಂದು ಮಾಹಿತಿ ಪಡೆಯುತ್ತಿದ್ದಾರೆ.

ಸರಿಯಾದ ರೀತಿಯಲ್ಲಿ ನೋಂದಣಿ ಮಾಡಿ ಮಾದಿಗಎಂದು ಪ್ರತ್ಯೇಕವಾಗಿ ಬರೆಸುವುದು ಅತ್ಯಗತ್ಯ ವಾಗಿದೆ.

ಸಮುದಾಯದ‌ ಕುಟುಂಬದ ಪ್ರತಿಯೊಂದು ಮಗುವಿನಿಂದ ಹಿರಿಯರವರಿಗೂ ಮಾದಿಗ 061
ಎಂದು ಜಾಗೃತೆಯಿಂದ ದಾಖಲೆ, ಸರಿಯಾಗಿ ನಮೂದಿಸಬೇಕು ಎಂದು ಮನವಿ ಮಾಡಿದರು..

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button