ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಕರಿಯ ಕಂಬಳಿ ಹೊದಿಸಿ ಸನ್ಮಾನ

ಚಾಮರಾಜನಗರ: ನಗರದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ರೇಷ್ಮೆ ಹಾಗೂ ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್, ಪಿಡಬ್ಲ್ಯೂಡಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇತರೆ ಗಣ್ಯರಿಗೆ ತಾಲೂಕು ಕುರುಬರ ಸಂಘದ ವತಿಯಿಂದ ಕರಿಯ ಕಂಬಳಿ ಹೊಂದಿಸಿ ಸನ್ಮಾನಿಸಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಆರ್. ಉಮೇಶ್ ಎಸ್ ಪಿಕೆ, ಅಹಿಂದ ಘಟಕದ ಜಿಲ್ಲಾ ಅಧ್ಯಕ್ಷ ಮಹೇಶ್ ಹಳೇಪುರ, ಓಬಿಸಿ ಘಟಕದ ರಾಜ್ಯಾಧ್ಯಕ್ಷ ಸೋಮಣ್ಣೇಗೌಡ, ಅಹಿಂದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಕಾವೇರಿ ಶಿವಕುಮಾರ್, ಅಹಿಂದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಗಣಿಗನೂರು ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸಿದ್ದರಾಜು ಕೋಟಂಬಳ್ಳಿ,ತಾಲೂಕು ಕುರುಬರ ಸಂಘದ ನಿದೆ೯ಶಕರಾದ ಗೋವಿಂದ,ಜಯರಾಮು, ಬಸವಣ್ಣ,ಕೆಕೆ ಹುಂಡಿ ನಾಗರಾಜು,ಪದ್ಮ ಪುರುಷೋತ್ತಮ್,ಶಿವಕುಮಾರ್ ಹೊಮ್ಮ ಸೇರಿದಂತೆ ಇತರರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ