ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಮಸ್ಕಿ : ಕಾಶ್ಮೀರದ ಪಹಲ್ಟಾಮ್‌ನಲ್ಲಿ ಅಮಾಯಕ ಹಿಂದೂಗಳ ಮೇಲೆ ನೆಡೆಸಿದ ಉಗ್ರರ ದಾಳಿಖಂಡನೀಯವಾದದ್ದು, ಕರ್ನಾಟಕದ ಮೂರು ಜನ ಸೇರಿ 26 ಪ್ರವಾಸಿಗರ ಮೇಲೆ ದಾಳಿ ನಡೆಸಿದ ಪರಿ ಹಿಂದೂಗಳ ಮೇಲೆ ಮಾಡಿದ ಷಡ್ಯಂತ್ರವಾಗಿದೆ. ದೇಶದ್ರೋಹಿಗಳನ್ನು ಮಟ್ಟ ಹಾಕುವಂತಹ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ರವರು ಒತ್ತಾಯಿಸಿದರು.
ಪಟ್ಟಣದ ದೈವದ ಕಟ್ಟೆ ಹತ್ತಿರ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿಯಾರ ಮಾತಿಗೂ ಮಣಿಯದೇ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಕೇಂದ್ರ ಸರ್ಕಾರ ಉಗ್ರರನ್ನು ಹುಡುಕಿ ತಕ್ಕನಾದ ಶಿಕ್ಷೆಯನ್ನು ನೀಡಬೇಕು.
ಇನ್ನೆಂದೂ ಇಂತಹ ಘಟನೆಗಳು ನಡೆಸಬಾರದು ಎನ್ನುವ ರೀತಿಯಲ್ಲಿ ಇನ್ನಿತರ ಉಗ್ರ ಸಂಘಟನೆಗಳು ಭಾರತದ ತಂಟೆಗೆ ಹೋಗಬಾರದೇನ್ನುವಂತಹ ರೀತಿಯಲ್ಲಿ ನಮ್ಮ ಪ್ರವಾಸಿಗರನ್ನು ಕೊಂದ ಪಾಪಿ ಪಾಕಿಸ್ತಾನದ ಉಗ್ರ ರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದುಆಗ್ರಹಿಸಲಾಯಿತ್ತು.
ಈ ವೇಳೆ, ಹಿಂದು ಪರ ಸಂಘಟನೆಗಳು, ಹಾಗೂ ದೇಶಭಕ್ತರು ಇತರರು ಉಪ್ಥಿತರಿದ್ದರು.