ಇತ್ತೀಚಿನ ಸುದ್ದಿ

ಜಿಲ್ಲಾಡಳಿತ ಭವನದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬಸವಣ್ಣನವರ ಪುತ್ಥಳಿಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಬಾರದು: ಸಿಎಂ. ಕೃಷ್ಣ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ
ಸಿ.ಎಂ. ಕೃಷ್ಣ ಅವರು ಮಾತನಾಡಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಏ.25 ರಂದು ಕಾನೂನುಬಾಹಿರವಾಗಿ ಮತ್ತು ಅನಧಿಕೃತವಾಗಿ ನಿರ್ಮಿಸಿರುವ ಬಸವಣ್ಣನವರ ಪುತ್ಥಳಿಯ ಉದ್ಘಾಟನೆಯ ಕಾರ್ಯಕ್ರಮದ ಬಗ್ಗೆ ಆಹ್ವಾನ ಪತ್ರಿಕೆಯನ್ನು ಎಲ್ಲಿಯೂ ಪ್ರಚಾರಗೊಳಿಸಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂದು ಜಿಲ್ಲಾಡಳಿತ ಭವನದಲ್ಲಿ ವಾಲ್ಮೀಕಿ ಪುತ್ಥಳಿ, ಜೈ ಭಗಿರಥ ಪುತ್ಥಳಿ ಹಾಗೂ ಕನಕದಾಸರ ಪುತ್ತಳಿಗೆ ಭೂಮಿ ಪೂಜೆ ನೆರವೇರಿಸುವ ಸಂಬಂಧ ಜಿಲ್ಲಾ ಆಡಳಿತ ಭವನಕ್ಕೆ ಬರುತ್ತಿದ್ದಾರೆ, ಅದೇ ವೇಳೆ ಜಿಲ್ಲಾಡಳಿತ ಭವನದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬಸವಣ್ಣನವರ ಪುತ್ಥಳಿಯನ್ನು ಸಹ ಉದ್ಘಾಟನೆ ಮಾಡಿಸಲು ಜಿಲ್ಲಾಡಳಿತವು ಸಜ್ಜುಗೊಂಡಿದೆ ಎಂಬ ಮಾಹಿತಿ ನಮಗೆ ತಿಳಿದಿದೆ, ಜಿಲ್ಲಾಡಳಿತ ಭವನದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬಸವಣ್ಣನವರ ಪುತ್ಥಳಿ ಬಗ್ಗೆ ನಾವು ಸುಮಾರು 10 ತಿಂಗಳಿನಿಂದಲೂ ಬಸವಣ್ಣನವರ ಪುತ್ಥಳಿ ನಿರ್ಮಿಸಲು ಡಾ. ರಾಜಕುಮಾರ್ ಕಲಾಮಂದಿರದ ಮುಂಬಾಗ ಬಸವಣ್ಣನವರ ಪುತ್ತಳಿ ಸ್ಥಳ ನಿಗದಿಯಾಗಿತ್ತು ಅಲ್ಲಿಯೇ ಅದನ್ನು ಸ್ಥಳಾಂತರಿಸಿ ಉದ್ಘಾಟನೆಯಾಗಬೇಕು ಎಂದು ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶವು ಬಂದಿರುತ್ತದೆ ಆದರೂ ಸಹ ಜಿಲ್ಲಾಡಳಿತವು ಅದನ್ನು ಉಲ್ಲಂಘಿಸಿ ಏ.25 ರಂದು ನಿಗದಿಯಾಗಿದ್ದ ಸ್ಥಳಕ್ಕೆ ಅದನ್ನು ಸ್ಥಳಾಂತರಿಸದೆ ಅನಧಿಕೃತ ಸ್ಥಳದಲ್ಲಿ ನಿರ್ಮಿಸಿರುವ ಸ್ಥಳದಲ್ಲಿಯೇ ಅದರ ಉದ್ಘಾಟನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಬಾರದು ಇದರಿಂದ ಮುಖ್ಯಮಂತ್ರಿಗಳಿಗೆ ಅಗೌರವ, ಅಪಮಾನವಾಗುತ್ತದೆ ಅಲ್ಲದೆ ಇದರಿಂದ ನಿಮ್ಮ ಕುರ್ಚಿಗೆ ರಾಜೀನಾಮೆ ನೀಡುವ ಸಂದರ್ಭವೂ ಬರಬಹುದು, ಈ ಹಿಂದೆ ಬಸವಣ್ಣನವರ ಪುತ್ತಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿರುವ ಸ್ಥಳದಲ್ಲಿಯೇ ಕಾನೂನು ಪ್ರಕಾರ ಅದನ್ನು ಲೋಕಾರ್ಪಣೆ ಮಾಡಿ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸುತ್ತೇವೆ. ಆದರೆ ಜಿಲ್ಲಾಡಳಿತವು ಅದರ ಉದ್ಘಾಟನೆಯನ್ನು ಕೈ ಬಿಡದೆ ತಮ್ಮ ಉದ್ದಟತನದಿಂದ ಇದರ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಿಂದ ಮಾಡಿಸ್ತೀವಿ ಎಂದರೆ ನಾವು ಈ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಗಣ್ಯರಿಗೂ ಹನೂರಿನಿಂದ ಚಾಮರಾಜನಗರದ ದಾರಿಯುದ್ದಕ್ಕೂ ಕಪ್ಪು ಬಾವುಟ, ಗೇರಾವ್ ಹಾಗೂ ಕಾರ್ಯಕ್ರಮಕ್ಕೆ ಧಿಕ್ಕಾರ ಕೂಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ನಟರಾಜ್ ಕದಂಬ ನಾ ಅಂಬರೀಶ್, ಭೋಗಾಪುರ ನಾಗೇಶ್ ಶಿವಶಂಕರ್(ಚೆಟ್ಟು) ಇದ್ದರು.

ವರದಿ : ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button