ಭಾರತದ ಸೂರ್ಯ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಡುಗೆ ಅಪಾರ: ಮಾರುತಿ ಜಿನ್ನಾಪುರ ಅಭಿಮತ.

ಮಸ್ಕಿ : ಭಾರತದ ಸೂರ್ಯ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಡುಗೆ ಅಪಾರ ವಾಗಿದೆಅಂಬೇಡ್ಕರ್ ಕಾರ್ಮಿಕರು, ಶೋಷಿತರು, ಮಹಿಳೆಯರು ಸೇರಿ ದೇಶದ ಎಲ್ಲ ವರ್ಗಗಳ ಏಳೆಗಾಗಿ ದುಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ರವರುಎಂದು ಮಾರುತಿ ಜಿನ್ನಾಪುರ ರವರು ಹೇಳಿದರು.
ತಾಲ್ಲೂಕಿನ ಬಳಗಾನೂರ ಗ್ರಾಮದ ಸಂತೆಬಜಾರ ಆವರಣದಲ್ಲಿ ಆಯೋಜಿಸಲಾಗಿದ್ದ ಡಾ.ಬಿ.ಆರ್ ಅಂಬೇಡ್ಕರರ 134 ನೇ ಜಯಂತಿ ಕಾರ್ಯಕ್ರಮ ದಲ್ಲಿಮಾತನಾಡಿದರು.ಸಂವಿಧಾನವನ್ನು ರಚಿಸುವಾಗ ಅನೇಕ ದೇಶಗಳ ಲಿಖಿತ ಸಂವಿಧಾನವನ್ನು ಅಧ್ಯಯನ ಮಾಡಿ ಸದೃಢ ಸಂವಿಧಾನ ನಮಗೆ ನೀಡಿದ್ದಾರೆ ಎಂದು ಸತೀಶ್ ಗೌಡ ತುರುವಿಹಾಳ ರವರು ಹೇಳಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಆರ್ ಮಾನಸಯ್ಯ ,ಗಂಗಾಧರ, ಬಿ.ತಿಕ್ಕಯ್ಯ,ಸುರೇಶ್ ಬಳಗಾನೂರ, ರತ್ನಮ್ಮ ಕಟ್ಟಿಮನಿ,ಮಾತನಾಡಿದರು.
ಈ ವೇಳೆ,ಬಸವರಾಜ ಗ್ಯಾಂಗ್ ಮನ್ ಗೌಡನಬಾವಿ ಹಾಡಿರುವ ಜೈಭೀಮ್ ಧ್ವನಿಸುರುಳಿಯನ್ನು ಹೋರಾಟಗಾರ ಆರ್ ಮಾನಸಯ್ಯರವರ ನೇತೃತ್ವದಲ್ಲಿ ಬಿಡುಗಡೆ ಗೊಳಿಸಲಾಯಿತು.ಈ ಸಂದರ್ಭದಲ್ಲಿ ,ಶಿವಕುಮಾರ್ ನಾಯಕ, ಆದೇಶನಗನೂರು,ಸಂತೋಷ ಹಿರೇದಿನ್ನಿ,ರಾಘವೇಂದ್ರ, ರವಿಕುಮಾರ್,ಸೇರಿದಂತೆ ಹಲವು ಮುಖಂಡರು ಅಂಬೇಡ್ಕರ್ ಅನುಯಾಯಿಗಳು,ಹೋರಾಟಗಾರರು ಇದ್ದರೂ.