ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ: ಜಿಲ್ಲಾಧಿಕಾರಿಗೆ ದೂರು

ಉದ್ದೇಶಪೂರ್ವಕವಾಗಿ ಅವರು ಅಪಮಾನ ಮಾಡಿರುತ್ತಾರೆ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು 2024ರಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಅವತ್ತಿನಿಂದ ಇವತ್ತಿನವರೆಗೂ ಬಲಗೈ ಸಮುದಾಯದವರನ್ನು ಕಂಡರೆ ವಿರೋಧಿಸುತ್ತಾರೆ, ಡಾ.ಬಿ.ಆರ್.ಅಂಬೇಡ್ಕರ್, ಹಾಗೂ ಸಂಘಟನೆಯ ಮುಖಂಡರನ್ನು ಕಂಡರೆ ವಿರೋಧ ವ್ಯಕ್ತಪಡಿಸುತ್ತಾರೆ ಹಾಗೂ ಸರ್ಕಾರಿ ಕಾರ್ಯಕ್ರಮವಾದ ಅಂಬೇಡ್ಕರ್ ಕಾರ್ಯಕ್ರಮ, ಹಾಗೂ ದಲಿತ ದೌರ್ಜನಕ್ಕೆ ಒಳಗಾದವರನ್ನು ಕಂಡರೆ ನಿರ್ಲಕ್ಷಿಸುತ್ತಾರೆ. ದಲಿತರು ದೌರ್ಜನ್ಯಗೆ ಒಳಪಟ್ಟರೆ ಸಂಬಂಧಪಟ್ಟವರಿಗಾಗಲೀ ಅವರ ಊರಿಗಾಗಲೀ ಹೋಗಿ ಸಮಾಧಾನ ಹೇಳುವುದಿಲ್ಲ. ಯಾವುದೇ ಸರ್ಕಾರಿ ಕಾರ್ಯಕ್ರಮಗಳಾದರೆ ಸಂಘ ಸಂಸ್ಥೆಗಳಿಂದ ಸಲಹೆ ಸೂಚನೆಗಳನ್ನು ಪಡೆಯುವುದಿಲ್ಲ, ತಾವೇ ಒಬ್ಬರೇ ಸರ್ವಾಧಿಕಾರ ಧೋರಣೆ ಮಾಡುತ್ತಾರೆ. ಚಾಮರಾಜನಗರ ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರು ಏ.14ರಂದು ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವವರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಕ್ರಮ ಜರುಗಿಸುವಂತೆ ಬಹಿರಂಗವಾಗಿ ಸೂಚನೆ ನೀಡಿದ್ದಾರೆ, ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮುನಿರಾಜು ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕೆಂದು ದಲಿತ ಮುಖಂಡರಾದ ಹೊಂಗನೂರು ನಟರಾಜು ಹಾಗೂ ಬೋಗಾಪುರದ ನಾಗೇಶ್ ಅವರು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ