ಕ್ರೀಡೆ

Virat Kohli: ಸಿಡ್ನಿ ಸಿಕ್ಸರ್ಸ್ ತಂಡ ಸೇರಿದ ವಿರಾಟ್‌ ಕೊಹ್ಲಿ; ಫ್ರಾಂಚೈಸಿ ಅಧಿಕೃತ ಘೋಷಣೆ!

ಸಿಡ್ನಿ : ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಅವರು ಮುಂದಿನ ಎರಡು ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಬಿಗ್‌ಬ್ಯಾಷ್‌(BBL) ಕ್ರಿಕೆಟ್‌ ಲೀಗ್‌ನ ಸಿಡ್ನಿ ಸಿಕ್ಸರ್ಸ್ ತಂಡದ ಪರ ಆಡಲಿದ್ದಾರೆ ಎಂದು ಸಿಡ್ನಿ ಸಿಕ್ಸರ್ಸ್(Sydney Sixers) ಫ್ರಾಂಚೈಸಿ ಮಂಗಳವಾರ ಅಧಿಕೃತ ಟ್ವೀಟ್‌ ಮಾಡಿ ಎಲ್ಲರನ್ನು ಅಚ್ಚರಿಪಡಿಸಿದೆ.

ಸಿಡ್ನಿ ಸಿಕ್ಸರ್ಸ್ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ವಿರಾಟ್‌ ಕೊಹ್ಲಿಯ ಫೋಟೊ ಹಾಕಿ ತಂಡಕ್ಕೆ ಸ್ವಾಗತ, ಮುಂದಿನ ಎರಡು ವರ್ಷ ನೀವು ನಮ್ಮ ತಂಡದ ಪರ ಆಡುವುದು ಸಂತಸದ ವಿಚಾರ ಎಂದು ಬರೆದುಕೊಂಡಿದೆ. ಈ ಟ್ವೀಟ್‌ ಕಂಡ ಅನೇಕರು ಬಿಸಿಸಿಐ ಅನುಮತಿ ಇಲ್ಲದೆ ಕೊಹ್ಲಿ ಹೇಗೆ ವಿದೇಶಿ ಲೀಗ್‌ ಆಡಲಿದ್ದಾರೆ ಎಂದು ಚಿಂತಿಸತೊಡಗಿದ್ದಾರೆ. ಆದರೆ ಇಲ್ಲೊಂದು ಸ್ವಾರಸ್ಯಕರ ಪ್ರಸಂಗ ಇದೆ.

ಹೌದು ಇಂದು ಎಪ್ರಿಲ್‌ 1 ತುಂಬಾ ವಿಶೇಷವಾದ ದಿನ. ವರ್ಷದ 365 ದಿನಗಳ ಪೈಕಿ ಜನರು ಲಘುವಾಗಿ ತೆಗೆದುಕೊಳ್ಳುವ ದಿನ ಇದು. ಈ ದಿನವನ್ನು ಮೂರ್ಖರ ದಿನ ಎಂದು ಕರೆಯುತ್ತಾ ಬರಲಾಗಿದೆ. ಇತರರಿಗೆ ಏನಾದರೂ ಸುಳ್ಳು ಹೇಳಿ ನಂಬುವಂತೆ ಮಾಡಿ ಮೂರ್ಖರನ್ನಾಗಿಸುತ್ತಾರೆ. ಬೇರೆಯವರು ಆ ಸುಳ್ಳನ್ನು ನಂಬಿ ಬೇಸ್ತು ಬಿದ್ದರೆ ಕೊನೆಗೆ ಅವರಿಗೆ ನಿಜ ವಿಷಯವನ್ನು ಹೇಳಿ ಎಪ್ರಿಲ್‌ ಫೂಲ್‌ ಎಂದು ಜೋರಾಗಿ ನಗುತ್ತಾರೆ. ಇಲ್ಲಿ ಅವರ ಸುಳ್ಳನ್ನು ನಂಬಿದವರೇ ಮೂರ್ಖರು. ಇದೀಗ ಸಿಡ್ನಿ ಸಿಕ್ಸರ್‌ ಕೂಡ ಕೊಹ್ಲಿ ತಮ್ಮ ತಂಡದ ಪರ ಆಡಲಿದ್ದಾರೆ ಎಂದು ಹೇಳಿ ಅವರ ಅಭಿಮಾನಿಗಳನ್ನು ಎಪ್ರಿಲ್‌ ಫೂಲ್‌ ಮಾಡಿದೆ.

https://twitter.com/SixersBBL/status/1906845854033645570?t=vAu3Ziwuk1WDtRg5HKrMRQ&s=19

ಈ ಪೋಸ್ಟ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸಿ, 3 ಬಾರಿ ಬಿಬಿಎಲ್ ಚಾಂಪಿಯನ್‌ಗಳ ಹಾಸ್ಯವನ್ನು ಮೆಚ್ಚಿಕೊಂಡರು. ಇದು ನಿಜವಾಗಿದ್ದರೆ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಸಿಕ್ಸರ್ಸ್‌ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಸ್ಟೀವ್ ಸ್ಮಿತ್ ಅವರ ತಂಡದ ಸಹ ಆಟಗಾರನಾಗುತ್ತಿದ್ದರು ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button