RCB Vs CSK: 6,155 ದಿನಗಳ ಬಳಿಕ ಚೆನ್ನೈ ಭದ್ರಕೋಟೆ ಛಿದ್ರಮಾಡಿದ ಆರ್ಸಿಬಿ

ಚೆನ್ನೈ : RCB Vs CSK: ಐಪಿಎಲ್ 2025ರ ಆವೃತ್ತಿಯ 8ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ 5ರನ್ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6,155 ದಿನಗಳ ಬಳಿಕ ಚೆನ್ನೈ ಭದ್ರಕೋಟೆಯನ್ನು ಛಿದ್ರ ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ಗಳನ್ನು ಕಲೆಹಾಕುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ಗೆ 197 ಬೃಹತ್ ಮೊತ್ತದ ರನ್ಗಳ ಗುರಿ ನೀಡಿತು. ಆದರೆ ಈ ಗುತರಿ ತಲುಪುವಲ್ಲಿ ಚೆನ್ನೈ ಎಡವಿದೆ.
ಚೆನ್ನೈ ಭದ್ರಕೋಟೆಯಲ್ಲಿ ಕೊನೆಗೂ ಬರೋಬ್ಬರಿ 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಚೆಪಾಕ್ನಲ್ಲಿ ಪಂದ್ಯ ನಡೆದಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ರಜತ್ ಪಾಟೀದಾರ್ ನಾಯಕತಯ್ವದ ಆರ್ಸಿಬಿ ತಂಡ 50 ರನ್ಗಳಿಂದ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು.

ಇನ್ನಿಂಗ್ಸ್ನ 2ನೇ ಓವರ್ ಹಾಕಿದ ಜೋಸ್ ಹ್ಯಾಸಲ್ವುಡ್ 4 ಎಸೆತಗಳ ಅಂತರದಲ್ಲಿ ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ಹಾಗೂ ರುತುರಾಜ್ ಗಾಯಕ್ವಾಡ್ ವಿಕೆಟ್ ಕಬಳಿಸಿದರು. ಬಳಿಕ ಹಂತ ಹಂತವಾಗಿ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಲು ಹೆಣಗಾಡಿ ಸೋಲೊಪ್ಪಿಕೊಂಡಿತು.
15 ಓವರ್ ವೇಳೆಗೆ ಸಿಎಸ್ಕೆ 99 ರನ್ಗೆ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ನಲ್ಲಿ ಜಡೇಜಾಗೆ ಧೋನಿ ಜೊತೆಯಾದರು. ಆಗ ಚೆನ್ನೈ ಅಭಿಮಾನಿಗಳು ಜೋರಾಗಿ ಕೂಗತೊಡಗಿದರು. ಇದೇ ವೇಳೆ ತಾವೇನು ಕಡಿಮೆಯಿಲ್ಲ ಎಂದು ಚೆನ್ನೈ ತವರು ಮೈದಾನದಲ್ಲೇ ಆರ್ಸಿಬಿ ಅಭಿಮಾನಿಗಳ ಆರ್ಭಟವೂ ಜೋರಾಯಿತು.
ಮೈದಾನದ ತುಂಬಾ ಸಿಎಸ್ಕೆ ಅಭಿಮಾನಿಗಳು ತುಂಬಿಕೊಂಡಿದ್ದರು. ಆರ್ಸಿಬಿ ಅಭಿಮಾನಿಗಳು ಮಾತ್ರ ಕಡಿಮೆ ಸಂಖ್ಯೆಯಲ್ಲಿದ್ದರು. ಯಾಕೆಂದರೆ ಪಂದ್ಯ ಇದ್ದಿದ್ದು ಚೆನ್ನೈನಲ್ಲಿ. ಅಷ್ಟದರೂ ಕೂಡ ಆರ್ಸಿಬಿ.. ಆರ್ಸಿಬಿ ಎನ್ನುವ ಘೋಷಣೆಗಳು ತುಸು ಜೋರಾಗಿಯೇ ಕೇಳಿಬಂದವು.
ಚೆನ್ನೈ ತಂಡದ ಪರವಾಗಿ ಆರಂಭಿಕ ಆಟಗಾರ ರಚಿನ್ ರವೀಂದ್ರ 31 ಎಸೆತಗಳಲ್ಲಿ 5 ಬೌಂಡರಿ 41 ರನ್ ಬಾರಿಸಿ ಔಟಾದರು. ರಾಹುಲ್ ತ್ರಿಪಾಠಿ 5, ರುತುರಾಜ್ ಗಾಯಕ್ವಾಡ್ ಶೂನ್ಯ, ದೀಪಕ್ ಹೂಡಾ 4, ಸ್ಯಾಮ್ ಕರನ್ 8 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ರವಿಚಂದ್ರನ್ ಅಶ್ವಿನ್ ಕೂಡ 11 ರನ್ ಕಲೆಹಾಕಿ ಕ್ಯಾಚ್ ನೀಡಿ ಪೆವಿಲಿಯನ್ನತ್ತ ತೆರಳಿದರು.
ಆರ್ಸಿಬಿಯು ಹೀಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲು ಇಂದು ಉತ್ತಮ ಪ್ರದರ್ಶನ ತೋರಿದ್ದರಿಂದ ಸಿಎಸ್ಕೆಗೆ ಮಣ್ಣು ಮುಕ್ಕಿಸಲು ಸಾಧ್ಯವಾಯಿತು. ಆರ್ಸಿಬಿ ಪರ ಬ್ಯಾಟ್ ಮಾಡಿದ ರತಜ್ ಪಾಟಿದಾರ್ 51, ಫಿಲಿಫ್ ಸಾಲ್ಟ್ 32, ವಿರಾಟ್ ಕೊಹ್ಲಿ 31, ದೇವದತ್ ಪಡಿಕ್ಕಲ್ 27, ಲಿವಿಂಗ್ಸ್ಟನ್ 10, ಜಿತೇಶ್ ಶರ್ಮಾ 12 ರನ್ಗಳನ್ನು ಕಲೆಹಾಕಿದರು. ಟಿಮ್ ಡೇವಿಡ್ 1 ಬೌಂಡರಿ, 3 ಸಿಕ್ಸರ್ ಸಿಡಿಸುವ ಮೂಲಕ ಆರ್ಸಿಬಿ ರನ್ಗಳನ್ನು 196ಕ್ಕೆ ಕೊಡೋಯ್ದರು.
ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿ ಪರ ಜೋಸ್ ಹ್ಯಾಸಲ್ವುಡ್ಹಾಗೂ ಭುವನೇಶ್ವರ್ಕುಮಾರ್ ಪವರ್ ಪ್ಲೇಯಲ್ಲಿ ಚೆನ್ನೈ ತಂಡವನ್ನು ಕಟ್ಟಿಹಾಕಿದ್ದರು. ಯಶ್ ದಯಾಳ್ ಅವರು ಮಾಡಿದ 13ನೇ ಓವರ್ನಲ್ಲಿ ರಚಿನ್ ರವೀಂದ್ರ ಹಾಗೂ ಶಿವಂ ದುಬೆ ವಿಕೆಟ್ ಉರುಳಿದವು. ಆದರೆ ಎಂಎಸ್ ಧೋನಿ, ಅಶ್ವಿನ್ಗಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದೇ ಇದೀಗ ಅಚ್ಚರಿಗೆ ಕಾರಣವಾಯಿತು.
ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು
