ಇತ್ತೀಚಿನ ಸುದ್ದಿ

ಚಾಮರಾಜನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಾಮಾನ್ಯ ಸಭೆ

ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣ ಗೌಡ್ರು ಬಣ) ಚಾಮರಾಜನಗರ ಜಿಲ್ಲಾ ಘಟಕ ವತಿಯಿಂದ ಸಾಮಾನ್ಯ ಸಭೆ ನಡೆಯಿತು.


ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹಾಗೂ ಮೈಸೂರು ಘಟಕದ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಮಾತನಾಡಿ, ಸಂಘರ್ಷ ರಥಯಾತ್ರೆಯ ಮಾರ್ಚ್ 27ರಂದು ಬೀದರ್ ಜಿಲ್ಲೆಯಿಂದ ಪ್ರಾರಂಭವಾಗುತ್ತದೆ ಇದಕ್ಕೆ ನಮ್ಮ ರಾಜ್ಯ ಅಧ್ಯಕ್ಷರಾದ ಟಿ.ಎನ್ ನಾರಾಯಣಗೌಡ್ರು ಚಾಲನೆ ನೀಡುತ್ತಾರೆ, ಅದರಿಂದ ಸಂಘರ್ಷ ರಥಯಾತ್ರೆ ಇರುವ ಸಂಬಂಧ ಚಾಮರಾಜನಗರ ಜಿಲ್ಲೆಯಲ್ಲಿಯು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.ನಮ್ಮ ರಾಜ್ಯದ ಉತ್ಪನ್ನಗಳು ಹಾಗೂ ಉದ್ಯೋಗಗಳು ಹೊರರಾಜ್ಯಕ್ಕೆ ತಲುಪದಂತೆ ನೋಡಿಕೊಳ್ಳಬೇಕು, ಉತ್ಪನ್ನಗಳ ಪ್ಲಾಸ್ಟಿಕ್ ಕವರ್ ಗಳ ಮೇಲೆ ಸಂಪೂರ್ಣ ಕನ್ನಡ ಬಳಕೆ ಇರಬೇಕು, ಅಲ್ಲದೆ ಉದ್ಯೋಗ ವಂಚಿತ ವ್ಯಕ್ತಿಗಳಿಗೆ ವಿಚಾರಣಾ ಸಂಕೀರ್ಣ ನಡೆಸಿ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುವಂತೆ ಮಾಡಬೇಕು ಅಲ್ಲದೆ ನಮ್ಮ ಸಂಘಟನೆಯು ನಾಡು ನುಡಿ ಜಲ ಸಂರಕ್ಷಣೆಗೆ ಹೆಚ್ಚು ಹೊತ್ತು ನೀಡುತ್ತದೆ ಎಂದು ತಿಳಿಸಿದರು.

ಇದೇ ವೇಳೆ ನೂತನವಾಗಿ ಯಳಂದೂರು ತಾಲ್ಲೂಕು ಅಧ್ಯಕ್ಷರಾಗಿ ರಮೇಶ್ ಅವರನ್ನು ಸಂಘಟನೆಯ ಶಾಲು ಹೊದಿಸಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರವೇ ಪ್ರಭಾರ ಜಿಲ್ಲಾ ಅಧ್ಯಕ್ಷ ಮಂಜೇಶ್, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷ ರಾಜೇಂದ್ರ, ಚಾಮರಾಜನಗರ ತಾಲೂಕು ಅಧ್ಯಕ್ಷರಾದ ಸಂತೋಷ್, ಸುಮ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ರಮೇಶ್ ನಾಯಕ್, ಪದಾಧಿಕಾರಿಗಳಾದ ರೂಪೇಶ್, ಅರ್ಜುನ್, ಸುಂದರ್, ಕಾರ್ತಿಕ್ ಗೌಡ, ಕೃಷ್ಣಪ್ಪ, ಮಾದು ನಾಯಕ, ಸ್ವಾಮಿ ಸೇರಿದಂತೆ ಇತರರಿದ್ದರು.


ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button