ಇತ್ತೀಚಿನ ಸುದ್ದಿ

ಕೋಟೆ ಪೂರ್ವ ವೀರಭದ್ರೇಶ್ವರ ಸ್ವಾಮಿ: ರೇಣುಕಾ ಭಗತ್ವಾದರ ಜೋಡಿ ರಥೋತ್ಸವ

ಕೊಟ್ಟೂರು: ಪಟ್ಟಣದ ಕೋಟಿ ಪೂರ್ವದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಬುಧವಾರ ಜರುಗಲಿದ್ದು, ಈ ನಿಮಿತ್ತ ಮಂಗಳವಾರ ವೀರಭದ್ರೇಶ್ವರ ಗುಗ್ಗಳದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.


ಮಂಗಳವಾರ ಬೆಳಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗಂಗೆ ಪೂಜೆ ನಂತರ ವೀರಭದ್ರೇಶ್ವರ ದೇವಾಲಯದ ಎದುರು ನಿರ್ಮಿಸಿದ್ದ ಅಗ್ನಿಕುಂಡದಲ್ಲಿ ಕೋಟೆ ಅನೇಕರು ಅಗ್ನಿಗುಂಡ ಪ್ರವೇಶ ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಮಂಗಳವಾರ ಬೆಳಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗಂಗೆ ಪೂಜೆ ನಂತರ ವೀರಭದ್ರೇಶ್ವರ ದೇವಾಲಯದ ಎದುರು ನಿರ್ಮಿಸಿದ್ದ ಅಗ್ನಿಕುಂಡದಲ್ಲಿ ವೀರಭದ್ರದೇವರ ಹಲೆಗೆ ಧರಿಸಿದವರು ಅಗ್ನಿ ಕುಂಡವನ್ನು ಹಾದು ಹೋದ ಮೇಲೆ ಅರಕೆ ಹೊತ್ತ ಅನೇಕ ಭಕ್ತರು ಕುಂಡದಲ್ಲಿ ಚಿಕ್ಕವರು, ದೊಡ್ಡವರು, ಗಂಡು, ಹೆಣ್ಣು ಮಕ್ಕಳು ಅಗ್ನಿ
ಹಾದು ಹೋಗುವ ಮೂಲಕ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.


ಆ ನಂತರ ಗುಗ್ಗಳ ಮೆರವಣಿಗೆ ಹೊರಡುತ್ತಿದ್ದಂತೆ ಸ್ತಿಯರು ಪುರುಷರು ಎನ್ನದೆ ಗಲ್ಲಕ್ಕೆ, ಮುಂಗೈಯಿಗೆ ಅರ್ದ ಅಡಿ ಉದ್ದದ ತಾಮ್ರದ ಶಸ್ತ್ರದಿಂದ ಸೂತ್ರವನ್ನು ಹಾಕಿಸಿಕೊಂಡು ಭಕ್ತಿಯನ್ನು ಅರ್ಪಿಸಿದರೆ, ಉಳಿದ ಪುರುಷ ಭಕ್ತರು ಒಂದು ನೂರ ಎಂಟು ಗಂಟುಗಳಿರುವ ದಾರವನ್ನು ಸೂತ್ರದ ಮೂಲಕ ಒಬ್ಬರ ಗಲ್ಲದಿಂದ ಮತ್ತೊಬ್ಬರ ಗಲ್ಲದ ಮೂಲಕ ಸುಮರು ನಾಲ್ಕು ರಿಂದ ಐದು ಜನರು ಗಂಟುಗಳನ್ನು ಎಳೆದುಕೊಂಡು ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.


ಗುಗ್ಗಳ ಮತ್ತು ಸಮಳದ ಸದ್ದಿನೊಂದಿಗೆ ಶಸ್ತ್ರಗಳನ್ನು ಗಲ್ಲಕ್ಕೆ ಭಕ್ತರು ಹಾಯಿಸಿಕೊಳ್ಳುವ ದೃಶ್ಯ ನೋಡುಗರಲ್ಲಿ ಭಯ ಮತ್ತು ರೋಮಾಂಚನ ಉಂಟುಮಾಡಿತ್ತು.ಬುಧವಾರ ಬೆಳೆಗ್ಗೆ 10.ಗಂಟೆಗೆ ಕೋಟೆ ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರ ಕಾಳಮ್ಮ ದೇವಿಯ ವಿವಾಹ ಮಹೋತ್ಸವ ಧಾರ್ಮಿಕ ವಿಧಿ ವಿಧಾನದಂತೆ ನಡೆಯುವುದು.


ಸಂಜೆ ಐದು ಗಂಟೆಗೆ ಕೋಟೆ ಶ್ರೀವೀರಭದ್ರೇಶ್ವರ ಸ್ವಾಮಿ ಮತ್ತು ಜಗದ್ಗುರು ರೇಣುಕಾಭಗತ್ವಾದರ ಜೋಡಿ ರಥೋತ್ಸವ ಜರುಗುವುದು.


ಶ್ರೀಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಹಾಗೂ ಅರ್ ಎಂ ಶಿವಪ್ ಹೀರೆಮಠ, ಕೊಟ್ಟೂರು ಇವರುಗಳ ದಿವ್ಯ ಸಾನಿಧ್ಯದಲ್ಲಿ ಮತ್ತು ಕೋಟೆ ಪೂರ್ವ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಸಮಸ್ತ ದೈವದವರು ಮತ್ತು ಊರಿನ ಪ್ರಮುಖರು ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.

ವರದಿ : C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button