ಇತ್ತೀಚಿನ ಸುದ್ದಿ

ಹೆಣ್ಣಿಲ್ಲದೆ ಜೀವವಿಲ್ಲ,ಹೆಣ್ಣಿಲ್ಲದೆ ಜೀವನವಿಲ್ಲ,ಹೆಣ್ಣು ಮಕ್ಕಳನ್ನು ರಕ್ಷಿಸಿ : ಬಸವರಾಜ ಗುಡದೂರು ಅಭಿಮತ

ಮಸ್ಕಿ : ತಾಲೂಕಿನ ಉದ್ಬಾಳ(ಯು) ಗ್ರಾಮ ಪಂಚಾಯತಿಯ ಕಾರ್ಯಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.

ಈ ವೇಳೆ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾದ ಶ್ರೀ ಬಸವರಾಜ ಗುಡದೂರು ರವರು
ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.ಅದು ಯಾವ ರೀತಿಯಾಗಿ ಅಂದರೆ ಅಡುಗೆ ಮನೆಯಿಂದ ಹಿಡಿದುಕೊಂಡು ಅಂತರಿಕ್ಷದವರೆಗೆ ಮಹಿಳೆಯರ ಸಾಧನೆ ಅಮೋಘ ಮತ್ತು ಅನನ್ಯವಾದದ್ದು ಹಾಗೂ
ಹೆಣ್ಣೆಂದರೆ ಸಹನೆ,ಸಹಿಷ್ಣುತೆ,ಪ್ರೀತಿ,ತ್ಯಾಗ,ಮಮತೆಯ ಸಾಕಾರ ಮೂರ್ತಿಯಾಗಿ,ತಾಯಾಗಿ ಜನ್ಮ ಕೊಟ್ಟು,ಸಹೋದರಿಯಾಗಿ ಸಲಹಿ ನೀಡಿ,ಹೆಂಡತಿಯಾಗಿ ಜೊತೆ ನಿಂತು,ಮಗಳಾಗಿ ಪೊರೆಯುವವಳು ಹೆಣ್ಣು.ಇಂತಹ ಮಹಿಳೆಗೆ ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸ ಬಲ್ಲಳು ಎಂಬುವುದು ಇಂದು ನಮ್ಮ ಕಣ್ಣು ಮುಂದೆ ಹಲವಾರು ಸಾಧನೆಗಳನ್ನು ಮಾಡಿದ ಮಹಿಳೆಯರ ಚರಿತ್ರೆಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು ಎಂದು ತಿಳಿಸಿದರು.

ನಂತರ ಮಹಿಳಾ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಸತ್ಯವೇಣಿ ದುರ್ಗಾಕ್ಯಾಂಪ್ ಮಾತನಾಡಿ
ಮಹಿಳೆ ಅಂದರೆ ಸ್ಪೂರ್ತಿ,ಕುಟುಂಬದ ನಂದಾದೀಪ,ಸದೃಡ ಸಮಾಜದ ಆಧಾರ,ಸಹನಾಮಯಿ,ಪದಗಳಲ್ಲಿ ವರ್ಣಿಸಲಾಗದ ವರ್ಣನಾತೀತ ವ್ಯಕ್ತಿತ್ವ.
ಜೀವನದ ಏರು-ಪೇರುಗಳಿಗೆ ಹೆದರದೆ ಆತ್ಮವಿಶ್ವಾಸ,ಧೈರ್ಯದಿಂದ ಮುನ್ನುಗ್ಗಿ ನಿಮ್ಮ ಗುರಿ ಸಾಧಿಸಿ.ಏಕೆಂದರೆ ಪ್ರಸ್ತುತ ಮಹಿಳೆಗೆ ನಮ್ಮ ಸಮಾಜದಲ್ಲಿ ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸ ಬಲ್ಲಳು ಎಂಬುವುದು ಇಂದು ನಮ್ಮ ಕಣ್ಣ ಮುಂದೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಅಲಂಕರಿಸಿರುವ ಹಲವಾರು ಹುದ್ದೆಗಳಿಂದ ನಮಗೆಲ್ಲ ತಿಳಿಯುತ್ತೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಂದ ಮಹಿಳೆಯರಿಗೆ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಅದೇ ರೀತಿ,ಉಪನ್ಯಾಸಕರಾದ ಹನುಮಂತಪ್ಪ ಚಿಕ್ಕಕಡಬೂರು ರವರು
ಮಾತನಾಡಿ,ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.ಈ ದಿನದಂದು ಮಹಿಳೆಯರ ಆರ್ಥಿಕ,ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

ಹಾಗೂ ಈ ದಿನ ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ” ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ,ಅದು ರಾಷ್ಟ್ರೀಯ,ಜನಾಂಗೀಯ, ಭಾಷಾವಾರು,ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ,ಎಲ್ಲಾದರಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ.ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಈ‌ ಸಂದರ್ಭದಲ್ಲಿ‌ ದೌರ್ಜನ್ಯ,ಅಸಮಾನತೆಗಳ ವಿರುದ್ಧದ ಮಹಿಳೆಯರ ಧ್ವನಿಗೆ ನಾವು – ನೀವೆಲ್ಲರೂ ಧ್ವನಿಗೂಡಿಸೋಣ.ಹಾಗೂ ಕುಟುಂಬದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಮಹಿಳೆಯ ಪಾತ್ರ ಹೆಚ್ಚಿರುತ್ತದೆ.ಆದ್ದರಿಂದ ಪ್ರತಿಯೊಬ್ಬರು ಲಿಂಗ ತಾರತಮ್ಯವಿಲ್ಲದೆ ಮಹಿಳೆಯರನ್ನು ಗೌರವಿಸುವ ಮತ್ತು ಅವರ ಹಕ್ಕು ಪಾಲಿಸುವ ಅವಶ್ಯಕತೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾ. ಪಂ.ಅಧ್ಯಕ್ಷರಾದ ನೀಲಕಂಠಪ್ಪ ನಾಯಕ,ಸದಸ್ಯರಾದ ಅಯ್ಯಪ್ಪಗೌಡ ಸುಂಕನೂರು,ಗ್ರಾ. ಪಂ.ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಮಹಿಳಾ ಸ್ವಸಹಾಯ ಗುಂಪಿನ ಅಧ್ಯಕ್ಷರಾದ ಶ್ರೀ ಮತಿ ಶಂಕ್ರಮ್ಮ ಉದ್ಬಾಳ (ಯು) ಹಾಗೂ ಗ್ರಾ. ಪಂ. ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಮಸ್ಕಿ ತಾಲೂಕಿನ NLRM ಮಹಿಳಾ ಒಕ್ಕೂಟದ ಅಧ್ಯಕ್ಷರು,ಸಿಬ್ಬಂದಿ ವರ್ಗದವರು,ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಸೇರಿದಂತೆ ಗ್ರಾಮದ ಪ್ರಮುಖ ಮುಖಂಡರು,ಮಹಿಳೆಯರು ಭಾಗವಹಿಸಿದ್ದರು..

Related Articles

Leave a Reply

Your email address will not be published. Required fields are marked *

Back to top button