ಇತ್ತೀಚಿನ ಸುದ್ದಿ
ಜ್ಯೋತಿಗೌಡನಪುರದ ಮಾದಯ್ಯನ ಗುಡ್ಡದಲ್ಲಿ ಗೀತ ಗಾಯನ ಕಾರ್ಯಕ್ರಮ

ಚಾಮರಾಜನಗರ : ತಾಲೂಕಿನ ಜ್ಯೋತಿಗೌಡನಪುರದ ಹೊರವಲಯದಲ್ಲಿರುವ ಮಾದಯ್ಯನ ಗುಡ್ಡದಲ್ಲಿ ಸ್ವರ ಸಿಂಚನ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಗೀತ ಗಾಯನ ಕಾರ್ಯಕ್ರಮವನ್ನು ಜೆ.ಬಿ. ಮಹೇಶ್ ಮತ್ತು ತಂಡದವರಿಂದ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಗಣಿ ಉದ್ಯಮಿ ರವಿ ಹಾಗೂ ನಾಗರಾಜು ಅವರು ತಬಲ ಹೊಡೆಯುವ ಮೂಲಕ ಚಾಲನೆ ನೀಡಿದರು.
ಇದೆ ವೇಳೆ ಮಹೇಶ್ ಮಾತನಾಡಿ, ಈಗಿನ ಯುವ ಪೀಳಿಗೆ ಜನರಿಗೆ ಇಂತಹ ಕಾರ್ಯಕ್ರಮಗಳು ಮಾರ್ಗದರ್ಶನವಾಗಿದೆ, ಅಲ್ಲದೆ ಇಂತಹ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿರುವ ಸ್ವರಸಿಂಚನ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ