ಇತ್ತೀಚಿನ ಸುದ್ದಿ

ಕೊಯಮತ್ತೂರು ಈಶ ಯೋಗ ಕೇಂದ್ರದಲ್ಲಿ ಅದ್ಧೂರಿ ಮಹಾ ಶಿವರಾತ್ರಿ; ಒಂದು ದೈವಿಕ ರಾತ್ರಿ ವಿಶೇಷ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಭಾಗಿ

ಶಿವನನ್ನು ಆರಾಧಿಸುವ ಮಹಾ ಶಿವರಾತ್ರಿ ಬಂದೇ ಬಿಡ್ತು. ದೇಶಾದ್ಯಂತ ಶಿವನ ಭಕ್ತರು ನಾಳೆ (ಫೆಬ್ರವರಿ 26, ಬುಧವಾರ) ಮಹಾ ಶಿವರಾತ್ರಿಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಶಿವನ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ.

ಇನ್ನ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ‘ಒಂದು ದೈವಿಕ ರಾತ್ರಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮ ನಾಳೆ (ಫೆ.26) ಸಂಜೆ 6 ಗಂಟೆಯಿಂದ ಮರು ದಿನ ಬೆಳಗ್ಗೆ 6 ಗಂಟೆಯವರಿಗೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

‘ಒಂದು ದೈವಿಕ ರಾತ್ರಿ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಎಂದು ಈಶ ಫೌಂಡೇಶನ್ ನ ಸದ್ಗುರು ಬಾಬಾ ಜಗ್ಗಿ ವಾಸುದೇವ್ ಭಕ್ತರಲ್ಲಿ ಮನವಿ ಮಾಡಿದ್ದಾರೆ. ಕಾರ್ಯಕ್ರಮವನ್ನು Sadguru.co/msr-kn ನೇರ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಡಿಡಿ ಚಂದನ ಹಾಗೂ ಪ್ರಮುಖ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗುವ ಬಗ್ಗೆ ಸದ್ಗುರು ಮಾಹಿತಿ ನೀಡಿದ್ದಾರೆ. ದೊಡ್ಡ ಪರದೆಯ ಮೂಲಕ ಪ್ರಸಾರ ಮಾಡಲಾಗುತ್ತದೆ. ಸಾವಿರಾರು ಭಕ್ತರು ಭಾಗವಹಿಸುವ ಸಾಧ್ಯತೆ ಇದೆ. ಇದಕ್ಕಾಗಿ ಹಲವು ದಿನಗಳಿಂದ ಕೊಯಮತ್ತೂರಿನ ಈಶ ಯೋಗ ಕೇಂದ್ರವು ಸಿದ್ಧತೆಗಳನ್ನು ನಡೆಸಿದೆ.

ಚಿಕ್ಕಬಳ್ಳಾಪುರದ ಈಶ ಯೋಗ ಕೇಂದ್ರದಲ್ಲೂ ವಿಶೇಷ ಮಹಾ ಶಿವರಾತ್ರಿ ಆಚರಣೆ

ಚಿಕ್ಕಬಳ್ಳಾಪುರದಲ್ಲಿ ಇರುವ ಆದಿಯೋಗಿ ಸನ್ನಿಧಿಯಲ್ಲೂ ಈಶ ಫೌಂಡೇಶನ್ ಸಿದ್ಧತೆಗಳನ್ನು ನಡೆಸಿದೆ. ಇಲ್ಲೂ ಕೂಡ ನಾಳೆ (ಫೆ.26, ಬುಧವಾರ) ಸಂಜೆ 6 ರಿಂದ ಮರು ದಿನ ಬೆಳಗ್ಗೆ 6 ರವರೆಗೆ ನಾನ್ ಸ್ಟಾಪ್ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಸಂಗೀತ ಕಾರ್ಯಕ್ರಮಗಳು, ಸಾಂಪ್ರದಾಯಿಕ ನೃತ್ಯ, ಕಲೆ, ಆದಿಯೋಗಿ ದಿವ್ಯ ದರ್ಶನ ಸೇರಿದಂತೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದ ಈಶ ಫೌಂಡೇಶನ್, ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಪ್ರತಿಮೆಗಳನ್ನು ಬೆಟ್ಟಗಳ ಸಮೀಪದ ತೆರೆದ ಬಯಲಿನಲ್ಲಿ ನಿರ್ಮಿಸಲಾಗಿದೆ. ಈಶ ಯೋಗ ಕೇಂದ್ರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ.

Related Articles

Leave a Reply

Your email address will not be published. Required fields are marked *

Back to top button