ಇತ್ತೀಚಿನ ಸುದ್ದಿ

ತೀರ್ಪುಗಾರರು ಮಕ್ಕಳ ಕಲಿಕೆಗನುಗುಣವಾಗಿ ತೀರ್ಪು ನೀಡಬೇಕು: ಜಯರಾಜು

ಚಾಮರಾಜನಗರ:ಫೆ.25; ತೀರ್ಪುಗಾರರು ಮಕ್ಕಳ ಕಲಿಕೆಗನುಗುಣವಾಗಿ ತೀರ್ಪು ನೀಡಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಜಯರಾಜು ತಿಳಿಸಿದರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕ್ಲಸ್ಟರ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಫ್ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರವು ಮಕ್ಕಳಿಗೆ ಇಂತಹ ಕಲಿಕಾ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ ಇದನ್ನು ಮಕ್ಕಳು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡು ಶಾಲೆಗೆ,ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಬಿ.ಆರ್.ಪಿ ರಮೇಶ್ ಮಾತನಾಡಿ, ಈ ಕಾರ್ಯಕ್ರಮ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದು, ಇದರಿಂದ ಮಕ್ಕಳ ಅನುಸರಣೆ ಎಂಬ ಕೌಶಲ್ಯ ಬೆಳೆಯುವುದು ಅಲ್ಲದೆ ಪೋಷಕರು ಸಕ್ರಿಯವಾಗಿ ಭಾಗವಹಿಸಿ ಮಕ್ಕಳ ಕಲಿಕೆಗೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಸಿ.ಆರ್.ಪಿ ಶಾಂತಮೂರ್ತಿಯವರು ಪ್ರಾಸ್ತವಿಕವಾಗಿ ಮಾತನಾಡಿದರು.
ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ಮೆರವಣಿಗೆ ನಡೆಯಿತು.


ಈ ಸಂದರ್ಭದಲ್ಲಿ ಹೊಗನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ, ಎಸ್ ಬಿ ಐ ಬ್ಯಾಂಕ್ ನ ಅವನೀಶ್ ಕುಮಾರ್ ಪಟ್ನಾಕ್, ಸಿ.ಆರ್.ಪಿ ಶಾಂತ ಮೂರ್ತಿ, ಮುಖ್ಯ ಶಿಕ್ಷಕರಾದ ಶ್ಯಾಮಸುಂದರ್, ಗೌರಮ್ಮ ಬಿ.ರಾಚಯ್ಯ ಮುಖ್ಯ ಶಿಕ್ಷಕ ನಿಂಗರಾಜು, ನೌಕರ ಸಂಘದ ನಿರ್ದೇಶಕರಾದ ಎಚ್.ಡಿ ಮಹೇಶ್,ಶಿಕ್ಷಕರಾದ ಬಸವಣ್ಣ, ಶಿವರುದ್ರಸ್ವಾಮಿ, ಮಾದೇಶ್, ಕುಮಾರಸ್ವಾಮಿ, ಭಾರತಿ, ಅಹಲ್ಯ, ಜಯಲಕ್ಷ್ಮಿ, ದಶಕಂಠ,ರವಿ ಅರಸು ವಿವಿಧ ಶಾಲೆಯ ಶಿಕ್ಷಕರು ಪೋಷಕರು ಹಾಜರಿದ್ದರು.

ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button