ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ: ಅಣ್ಣಪ್ಪಸ್ವಾಮಿ

ಚಾಮರಾಜನಗರ: ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್.ಅಣ್ಣಪ್ಪಸ್ವಾಮಿ ತಿಳಿಸಿದರು.
ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಮಂಗಲ ವತಿಯಿಂದ ನಡೆದ ಕಲಿಕಾ ಹಬ್ಬವನ್ನು ಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಎಸ್.ಅಣ್ಣಪ್ಪ ಸ್ವಾಮಿ ಉದ್ಘಾಟಿಸಿ ಮಾತನಾಡಿದಅವರು ಮಕ್ಕಳು ನಿರಂತರವಾಗಿ ಓದುವ ಮೂಲಕ ಕಲಿಕಾ ಪ್ರಕ್ರಿಯೆ ಹೆಚ್ಚುತ್ತದೆ, ಕಲಿಕೆಯಲ್ಲಿ ಯಾವುದೇ ಮಕ್ಕಳು ಹಿಂದುಳಿಯಬಾರದು ಎಂದು ಸರ್ಕಾರವು ಇಂತಹ ಯೋಜನೆಗಳನ್ನು ಜಾರಿಗೆ ತಂದಿರುವುದು ಮಕ್ಕಳಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು. ಸಿ.ಆರ್.ಪಿ. ಶಿವಮೂರ್ತಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾ.ಪಂ.ಸದಸ್ಯರಾದ ಸುರೇಶ್,ಶೋಭಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಗಿರಿಜಾ, ಗ್ರಾ.ಪಂ.ಸದಸ್ಯರಾದ ಸುಮಾ,ವಾಣಿಶ್ರೀ, ಮಂಗಳಮ್ಮ, ಲಕ್ಷ್ಮಿ, ಜ್ಯೋತಿ,ಚಂದ್ರು, ಟಿ.ಪಿ.ಒ. ಬಸವರಾಜು, ಸಿ.ಆರ್.ಪಿ ಶಿವಮೂರ್ತಿ, ಇಸಿಒ. ಶಿವಕುಮಾರ್, ರೇವಣ್ಣ, ಬಿ.ಆರ್.ಪಿ.ಸವಿತಾ,ಮುಖ್ಯ ಶಿಕ್ಷಕರಾದ ವೆಂಕಟೇಶ್, ರವಿಕುಮಾರ್, ದೈಹಿಕ ಶಿಕ್ಷಕ ಜಯರಾಜ್, ಶಿಕ್ಷಕರಾದ ಲತಾ,ರಾಜು, ಪುಟ್ಟಸ್ವಾಮಿ, ನಂಜುಂಡಸ್ವಾಮಿ,ಲಿಂಗರಾಜು, ಮಹೇಶ್ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಯ ಶಿಕ್ಷಕರು ಹಾಜರಿದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ