ಮಸ್ಕಿಯ ಸನರೈಸ್ ಮಹಿಳಾ ಪದವಿ ಮಹಾವಿದ್ಯಾಲಯಕ್ಕೆ ವಿಚಕ್ಷಕದಳ ಭೇಟಿ.

ಮಸ್ಕಿ : ಪಟ್ಟಣದ ಸರ್ಕಾರಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಪದವಿಯ ಬಿ.ಎ ಮತ್ತು ಬಿ. ಕಾಂ ಪರೀಕ್ಷಾ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಚಕ್ಷಕ ದಳದ ಅಧ್ಯಕ್ಷರು ಮತ್ತು ಸದಸ್ಯರುಗಳು ಇಂದು ಭೇಟಿ ನೀಡಿ
ಮಹಾವಿದ್ಯಾಲಯದಲ್ಲಿನ ವಿದ್ಯಾರ್ಥಿನಿಯರು ನಕುಲು ಮಾಡದೆ ಸುಸೂತ್ರವಾಗಿ ಪರೀಕ್ಷೆ ಬರೆಯಲು ಕಲ್ಪಿಸಿರುವ ವ್ಯವಸ್ಥೆ, ಸಿಸಿ ಕ್ಯಾಮರಾ ಅಳವಡಿಕೆ ಮಾಡಿರುವುದನ್ನು ವೀಕ್ಷಿಸಿದರು,
ಈ ವೇಳೆ, ಮಾತನಾಡಿದ ಅವರು,
ಇತ್ತೀಚಿಗೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಚಂದ್ರಶೇಖರ H M ಅವರ ಮೇಲೆ ಮಾಡಿರುವ ಹಣದ ಬೇಡಿಕೆ ಆರೋಪ ಸುಳ್ಳು ಅವರು ಬಾಹ್ಯಹಿರಿಯ ಮೇಲ್ವಿಚಾರಕರ ಮತ್ತು ವಿಚಕ್ಷಕ ದಳದ ನೇಮಕ ವಿಚಾರದಲ್ಲಿ ಯಾವುದೇ ರೀತಿಯಾದಂತ ಹಣದ ಬೇಡಿಕೆ ಇಟ್ಟಿರುವುದಿಲ್ಲ, ಕಳೆದ ಎರಡು ಮೂರು ವರ್ಷಗಳಿಂದ ಪರೀಕ್ಷಾ ವಿಭಾಗದಲ್ಲಿ ಉತ್ತಮವಾದ ಆಡಳಿತವನ್ನು ಮಾಡಿಕೊಂಡು ಬಂದಿದಾರೆ ಜೋತೆಗೆ ಸಕಾಲದಲ್ಲಿ ವಿದ್ಯಾರ್ಥಿನಿಯರಿಗೆ ಫಲಿತಾಂಶವನ್ನು ನೀಡಿ ವಿದ್ಯಾರ್ಥಿನಿಯರಿಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಚಕ್ಷಕ ದಳದಅಧ್ಯಕ್ಷರಾದ S R ಸಾಹು ಸದಸ್ಯರಾದ ಡಾ. ರೇಣುಕಾರೆಡ್ಡಿ , ಪ್ರೊ. ಲಕ್ಷ್ಮಿ ಹೆಬ್ಬಾಳ್,ಪ್ರಾಂಶುಪಾಲರಾದ ಸಿದ್ದಪ್ಪ H ಉದ್ಬಾಳ, ಇದ್ದರು.