ಇತ್ತೀಚಿನ ಸುದ್ದಿ

ಸರಕಾರಿ ಶಾಲೆ ಮಕ್ಕಳಿಗೆ ಆರತಿ ಬೆಳಗಿ ಶಾಲೆಗೆ ಬರಮಾಡಿಕೊಂಡು ಪುರಸಭೆ ಉಪಾಧ್ಯಕ್ಷೆ : ಶ್ರೀ ಮತಿಗೀತಾ ಶಿವರಾಜ್ ಬುಕ್ಕಣ್ಣ

ಮಸ್ಕಿ : ಪಟ್ಟಣದ ಧಾನಗರವಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸರಳ ಸುಂದರವಾಗಿ ಆಚರಣೆ ಮಾಡಲಾಯಿತು.

ಸುಂದರ ಕಾರ್ಯಕ್ರಮದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಶಿವರಾಜ್ ಬುಕ್ಕಣ್ಣ ಇವರು ಮಕ್ಕಳಿಗೆ ಆರತಿ ಬೆಳಗುವುದರ ಮೂಲಕ ಶಾಲೆಗೆ ಬರಮಾಡಿಕೊಂಡರು. ಶಾಲೆಯ ಬೂದಾನಿಗಳಾದ ಅರ್ಜುನ್ ಸಿಂಗ್ ಮಾಲಿ ಪಾಟೀಲ್ ಇವರು ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯನ್ನು ಮಾಡಿದರು. ಮಸ್ಕಿಯ ಸಿ. ಆರ್ .ಪಿ ಆದ ಶ್ರೀರಾಮಸ್ವಾಮಿ ತಳಕಲ್ ಇವರು ಮಕ್ಕಳಿಗೆ ಶುಭಾಶಯ ಕೋರುವ ಮೂಲಕ ಪ್ರತಿದಿನ ಶಾಲೆಗೆ ಬಂದು ಒಳ್ಳೆಯ ವಿದ್ಯಾವಂತರಾಗಿ, ಬುದ್ದಿವಂತರಾಗಿ,ಸಮಾಜಕ್ಕೆ ಒಳ್ಳೆ ಪ್ರಜೆಗಳಾಗಬೇಕೆಂದು ಹರಸಿದರು. ನಂತರ ಮುಖ್ಯ ಗುರುಗಳಾದ ಶ್ರೀಮತಿ ಶ್ರೀಕಾಂತಮ್ಮ ಅವರು ಎಲ್ಲ ಮಕ್ಕಳು ಪ್ರತಿದಿನ ಶಾಲೆಗೆ ಬರಬೇಕು ಮತ್ತು ಪ್ರತಿಯೊಬ್ಬ ಮಕ್ಕಳನ್ನು ಕರೆದುಕೊಂಡು ಬರಬೇಕು ದಾಖಲಾತಿಯು ಆರಂಭವಾಗಿದ್ದು ಆದಷ್ಟು ಬೇಗ ಎಲ್ಲರೂ ಶಾಲೆಗೆ ದಾಖಲಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ,ಮಲ್ಲಮ್ಮ ಯಶೋಧ, ಮಧುಮತಿ,
ಶಿಕ್ಷಕಿಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button