ಇತ್ತೀಚಿನ ಸುದ್ದಿ

ಶಾಲೆಗಳು ಆರಂಭ ತಾಲೂಕಿನ ಎಲ್ಲೆಡೆ ಮಕ್ಕಳಿಗೆ ಸಿಹಿ ತಿನಿಸಿ ಶಾಲೆಗಳಿಗೆ ಬರಮಾಡಿಕೊಂಡ ಶಿಕ್ಷಕರು.

ಮಸ್ಕಿ :ರಾಜ್ಯದ ಎಲ್ಲೆಡೆ ಶಾಲೆಗಳು ಪುನರಾರಂಭವಾಗಿದ್ದು, ಒಂದೂವರೆ ತಿಂಗಳ ಬೇಸಿಗೆ ರಜೆಯ ನಂತರ ಪಟ್ಟಣದ ಕೇಂದ್ರ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ಧನಗವಾಡಿ,ನಾಯಕವಾಡಿ,ಹಾಗೂ
ತಾಲ್ಲೂಕಿನ ಹಂಚಿನಾಳ ಕ್ಯಾಂಪ್, ಉದ್ಬಾಳ ಯು,ಮೆದಿಕಿನಾಳ, ಹಾಲಪುರ,ಜಿನ್ನಾಪುರ,ಬುದ್ದಿನ್ನಿ,
ಚಿಕ್ಕಕಡುಬೂರು, ಅಡವಿ ಭಾವಿ ತಾಂಡದ ಆಶ್ರಮ ಶಾಲೆ
ಸೇರಿದಂತೆ ಎಲ್ಲಾ ಸರಕಾರಿ ಶಾಲೆಗೆ ಮರಳಿದ ಮಕ್ಕಳಲ್ಲಿ ಸಹಪಾಠಿಗಳನ್ನು ಮತ್ತೆ ಭೇಟಿ ಮಾಡಿದ ಸಂಭ್ರಮ ಮೇರೆಮೀರಿತ್ತು.

ಮಕ್ಕಳ ಸ್ವಾಗತಕ್ಕಾಗಿ , ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗಾರಗೊಳಿಸಲಾಗಿತ್ತು. ಶಾಲೆಗಳಲ್ಲಿ ಹಬ್ಬದ ವಾತಾರಣವಿತ್ತು. ಎರಡು ದಿನಗಳಿಂದ ಶಾಲೆಗೆ ಬರುತ್ತಿರುವ ಶಿಕ್ಷಕ ವೃಂದ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಮಕ್ಕಳಿಗೆ ಸಿಹಿ ತಿನಿಸಿ ಶಾಲೆಗಳಿಗೆ ಬರಮಾಡಿಕೊಂಡರು.

Related Articles

Leave a Reply

Your email address will not be published. Required fields are marked *

Back to top button