ಇತ್ತೀಚಿನ ಸುದ್ದಿ

ಮನುಷ್ಯನ ಒಳಿತಿಗಾಗಿ ಧಾರ್ಮಿಕ ಕಾರ್ಯಗಳು.ಚಿರಬಿ -ರಾಂಪುರ ಗ್ರಾಮಸ್ಥರ ಒಮ್ಮತದಿಂದ ಅದ್ದೂರಿ ರಥೋತ್ಸವ –

ಕೊಟ್ಟೂರು: 17 ವರ್ಷಗಳಿಂದ ರದ್ದಾಗಿದ್ದ ಚಿರಿಬಿ ಶ್ರೀ ಮೂಗಬಸವೇಶ್ವರ ರಥೋತ್ಸವವನ್ನು ಈ ಬಾರಿ ಉಭಯ (ಚಿರಿಬಿ ಮತ್ತು ರಾಂಪುರ) ಗ್ರಾಮಸ್ಥರ ಸಹಕಾರ ಹಾಗೂ ಕಾನೂನು ಮಾರ್ಗದರ್ಶನದಲ್ಲಿ ಧಾರ್ಮಿಕ ದತ್ತಿ ಇಲಾಖೆ ನೇತೃತ್ವದಲ್ಲಿ ನಡೆಸುವ ಕುರಿತು ವಿಜಯನಗರದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಭಕ್ತರಲ್ಲಿ ಆಶಾ ಭಾವನೆ ಮೂಡಿಸಿದ್ದಾರೆ.

ಜಿಲ್ಲಾಧಿಕಾರಿ ಮಂಗಳವಾರ ಅಮವಾಸ್ಯೆ ನಿಮಿತ್ತ ಚಿರಿಬಿ ಶ್ರೀ ಮೂಗಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ರಥ ಮತ್ತು ರಥೋತ್ಸವವು ನಡೆಯುವ ಮಾರ್ಗ ಪರಿಶೀಲಿಸಿ, ದೇವಸ್ಥಾನದ ಜಾಗವನ್ನು ಸಂಪೂರ್ಣ ಹದ್ದು ಬಸ್ತು ಮಾಡುವಂತೆ ಹಾಗೂ ದೇವಸ್ಥಾನ ಅಭೀವೃದ್ದಿ ಪಡಿಸುವಂತೆ ,ಪ್ರತಿ ಅಮವಾಸ್ಯೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸುವಂತೆ ಹನುಮಂತಪ್ಪ ಕಾರ್ಯ ನಿರ್ವಾಹಕ ಅಧೀಕಾರಿಗಳಿಗೆ ಸೂಚಿದರು.


ದೇವಾಸ್ಥಾನದ ವಿಚಾರವಾಗಿ ಕಾನೂನು ಮೊರೆ ಹೋಗಿದ್ದ ಚಿರಿಬಿ ಮತ್ತು ರಂಪುರ ಗ್ರಾಮಸ್ಥರ ಅಭಿಪ್ರಾಯವನ್ನು ಮಾತನಾಡಿದ ಜಿಲ್ಲಾಧಿಕಾರಿಗಳು ಮೂಗಬಸವೇಶ್ವರ ದೇವಾಸ್ಥಾನವು ಧಾರ್ಮಿಕ ದತ್ತಿ ಇಲಾಖೆಯ ಸುಪರ್ಧಿಯಲ್ಲಿದ್ದು. ರಥೋತ್ಸವದ ಬಗ್ಗೆ
ಉಭಯ ಗ್ರಾಮಸ್ದರು ಹಸ್ತಕ್ಷೇಪ ಮಾಡುವಂತಿಲ್ಲ, ಅಲ್ಲದೆ ತಾವು ನ್ಯಾಯಾಲಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ
ರಥೋತ್ಸವ ನಡೆಸದಂತೆ ಕೋರಿಲ್ಲ. ಲಾಂಡ್ ಆಡ್ ಮೀರಬಾರದು ಎಂಬ ಕಾರಣಕ್ಕಾಗಿ ರಥ ರದ್ದು ಪಡಿಸಲಾಗಿದೆ ಎಂದರು.
ಈ ವಿಚಾರವಾಗಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿ ಕನೂನು ವ್ಯಾಪ್ತಿಯಲ್ಲಿ 18.8.2025ರಂದು ರಧೋತ್ಸವವನ್ನು ನಡೆಸುವ ಬಗ್ಗೆ ಪ್ರಸ್ಥಾಪಿಸಿದರು.ರಥೋತ್ಸವಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯರ ಒಳಿತಿಗಾಗಿ ನಡಿಯುತ್ತವೆ. ಇದಕ್ಕೆ ಯಾರು ಅಡ್ಡಿಯಾಗದೆ ಉಭಯ ಗ್ರಾಮಸ್ಥರ ಸಹಕಾರದಿಂದ ಈ ಬಾರಿ ಶ್ರೀ ಸ್ವಾಮಿಯ ರಥೋತ್ಸವವನ್ನು ಅದ್ದೂರಿಯಾಗಿ ಅಚರಿಸೋಣ ಎಂದರು.


ಈ ವೇಳೆ ಡಾ.ಮೂಗಪ್ಪ,ಎಂ ಎಂ ಜೆ ಮೂಗಣ್ಣ, ಸ್ವಾತಂತ್ರ,ರಾಂಪುರ ಗ್ರಾಮಸ್ಥರಾದ ಭರಮಜ್ಜ ಬಸವನಗೌಡ ವಕೀಲರು,ಮದ್ಯಾನಪ್ಪ ವಕೀಲರು,ಅಗಡಿ ಮಂಜುನಾಥ್ ವಕೀಲರು,
ನಾಗಭೊಷಣ, ಚಿರಿಬಿ ಗ್ರಾಮದ ಮುಖಂಡ ವೀರಯ್ಯ, ತಾ.ಪಂ ಸದಸ್ಯ ಪಿ ಗಂಗಾಧರ,ಗ್ರಾ .ಪಂ ಸದಸ್ಯ ಪಿ ನಾಗರಾಜ ,ತಹಶೀಲ್ದಾರ್ ಜಿ ಕೆ ಅಮರೇಶ್,ತಾ ಪಂ ಇ ಓ ಡಾ.ಬಿ .ಆನಂದ್ ಕುಮಾರ್,ಕೊಟ್ಟೂರು ಪೋಲಿಸ್ ಠಾಣಿಯ ಸಿ ಪಿ ಐ ವೆಂಕಟಸ್ವಾಮಿ, ಪಿ ಎಸ್ ಐ ಗೀತಾಂಜಲಿ ಸಿಂಧೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button