ಇತ್ತೀಚಿನ ಸುದ್ದಿ
BREAKING: ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿ : ತಾಯಿಯ ಮಡಿಲಲ್ಲೇ ಪ್ರಾಣ ಬಿಟ್ಟ ಕಂದಮ್ಮ.!

ಮಂಡ್ಯ : ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯದ ನಂದ ಸರ್ಕಲ್ ಬಳಿ ನಡೆದಿದೆ.
ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ಬೈಕ್ ನಲ್ಲಿ ಬರುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಬೈಕ್ ಸವಾರ ಆಯತಪ್ಪಿ ಕೆಳಗೆ ಬೀದ್ದಿದ್ದಾನೆ.
ಬೈಕ್ ನಲ್ಲಿದ್ದ ಆತನ ಪತ್ನಿ ಹಾಗೂ ಮಗು ಕೂಡ ಕೆಳಗೆ ಬಿದ್ದಿದ್ದು, ಮಗುವಿನ ತಲೆ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಮಗುವಿನ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ತಾಯಿಯ ಮಡಿಲಲ್ಲೇ ಕಂದಮ್ಮ ಉಸಿರುಚಲ್ಲಿದೆ. ಮೂರುವರೆ ವರ್ಷದ ಹೃತಿಕ್ಷಾ ಮೃತ ಮಗು. ಮಗುವನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮುಗ್ದ ಕಂದಮ್ಮನ ಜೀವವವೇ ಹೋಗಿದ್ದು, ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ಆಘಾತಗೊಂಡಿದ್ದಾರೆ.